ಬುಖಾರಿಗೆ ಛೀಮಾರಿ, ಅಣ್ಣಾಗೆ ಜೈ ಎಂದ ಮುಸ್ಲೀಮರು

ಗಾಂಧಿವಾದಿ ಅಣ್ಣಾ ಹಜಾರೆ, 'ವಂದೇ ಮಾತರಂ' ಹೇಳುವಂತೆ ಯಾರಿಗೂ ಒತ್ತಡ ಹೇರುತ್ತಿಲ್ಲ. ಮುಸ್ಲೀಮರು ಅಣ್ಣಾ ಹಜಾರೆ ಪರ ಹೋರಾಟದಲ್ಲಿ ಭಾಗಿಯಾದಲ್ಲಿ ಯಾವುದೇ ತಪ್ಪಿಲ್ಲ ಎಂದು ಸುನ್ನಿ ಮೌಲ್ವಿ ಮೌಲಾನಾ ಅಬುಲ್ ಇರ್ಫಾನ್ ಫಿರಂಗಿ ಮಹ್ಲಿ ಹಾಗೂ ಇಸ್ಲಾಮಿಕ್ ಸ್ಕಾಲರ್ ಮೌಲಾನಾ ಕಲ್ಬೆ ಜವಾದ್ ಹೇಳಿದ್ದಾರೆ.
ಮಹಾತ್ಮಾ ಗಾಂಧಿಜೀ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ವಂದೇ ಮಾತರಂ ಬಳಸುತ್ತಿದ್ದರು. ಅವರ ಹೋರಾಟಕ್ಕೆ ಅಸಂಖ್ಯಾತ ಮುಸ್ಲೀಮರು ಬೆಂಬಲ ನೀಡಿದ್ದರು. ಆ ಇಲ್ಲದ ಧಾರ್ಮಿಕ ಪ್ರಜ್ಞೆ ಈಗ ಏಕೆ? ಎಂದು ಮೌಲ್ವಿಗಳು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರ ಸಂಪೂರ್ಣ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಭ್ರಷ್ಟಾಚಾರಿಗಳಿಗೆ ಮತ ಹಾಕಬಾರದು. ನೈತಿಕತೆಯಿಲ್ಲದ ರಾಜಕಾರಣಿಗಳಿಗೆ ಬೆಂಬಲ ನೀಡಬಾರದು. ಎಂದು ಮೌಲ್ವಿಗಳು ಕರೆ ಕೊಟ್ಟರು.
ಮುಸ್ಲೀಮರು ಅಲ್ಲಾ-ಓ-ಅಕ್ಬರ್ ಎಂದು ಘೋಷಿಸಲಿ ಅಥವಾ ಮೌನವಾಗಿರಲಿ. ಹೋರಾಟದಲ್ಲಿ ಭಾಗವಹಿಸಲಿ, ಇದು ಭ್ರಷ್ಟಾಚಾರ ವಿರುದ್ಧದ ಹೋರಾಟ ವಂದೇ ಮಾತರಂ ವಿರುದ್ಧ ಅಲ್ಲ ಎಂಬುದು ನೆನಪಿರಲಿ ಎಂದು ಮೌಲಾನಾ ಜವಾದ್ ಹೇಳಿದ್ದಾರೆ.












Click it and Unblock the Notifications