ಅತಿ ಭ್ರಷ್ಟ ಜನನಾಯಕರಲ್ಲಿ ಯಡ್ಡಿಗೆ 10ನೇ ಸ್ಥಾನ

Yeddyurappa in top 10 corrupt politicians list
ಬೆಂಗಳೂರು, ಆ.23: ಮೆನ್ ಎಕ್ಸ್ ಪಿ ಎಂಬ ಖಾಸಗಿ ಸಂಸ್ಥೆ ಹಾಗೂ ಯಾಹೂ ಲೈಫ್ ಸ್ಟೈಲ್ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ ಅತಿ ಭ್ರಷ್ಟ ಜನಪ್ರತಿನಿಧಿಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಸೇರಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 10ನೇ ಸ್ಥಾನ ಪಡೆದಿದ್ದಾರೆ. ದೇಶದ ಒಟ್ಟು 10 ಭ್ರಷ್ಟಾಚಾರಿ ರಾಜಕಾರಣಿಗಳ ಪಟ್ಟಿಯ ಅಗ್ರಸ್ಥಾನದಲ್ಲಿ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ ಇದ್ದಾರೆ.

ನಂತರ ಡಿಎಂಕೆಯ ಎ ರಾಜಾ, ಮಾಯಾವತಿ, ಲಾಲೂ ಪ್ರಸಾದ್ ಯಾದವ್, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಖೋಡಾ, ಮುಲಾಯಂ ಸಿಂಗ್ ಯಾದವ್, ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಶರದ್‌ಪವಾರ್, ಜಯಲಲಿತಾ ಇದ್ದಾರೆ.

ಸಿಎಂ ಆಗಿ ಜನಪ್ರಿಯತೆಯಲ್ಲಿ ತಾವು ಮೂರನೇ ಸ್ಥಾನದಲ್ಲಿ ಇದ್ದೇನೆ ಎನ್ನುತ್ತಿದ್ದ ಯಡಿಯೂರಪ್ಪ ಇಲ್ಲಿ 10ನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಭೂ ಹಗರಣ, ಅಕ್ರಮ ಗಣಿಗಾರಿಕೆಯಲ್ಲಿ ಯಡಿಯೂರಪ್ಪನವರ ಪಾತ್ರವಿದೆ. ಹಾಗಾಗಿ ಅವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ್ದಾರೆ ಎಂದು ಅಂಕಣದಲ್ಲಿ ಹೇಳಲಾಗಿದೆ.

ಕಲ್ಮಾಡಿ, ರಾಜಾ ಮತ್ತು ಮಧುಖೋಡಾ ಜೈಲಿನಲ್ಲಿದ್ದಾರೆ. ಮಾಯಾವತಿ, ಜಯಲಲಿತಾ ಮುಖ್ಯಮಂತ್ರಿಗಳಾಗಿ ರಾಜ್ಯಭಾರ ಮಾಡುತ್ತಿದ್ದಾರೆ. ಕರುಣಾನಿಧಿ, ಮುಲಾಯಂ, ಲಾಲೂ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ, ಶರದ್ ಪವಾರ್ ಕ್ರಿಕೆಟ್ ನಿಂದ ಪವರ್ ಹೆಚ್ಚಿಸಿಕೊಂಡಿದ್ದಾರೆ.

ಭ್ರಷ್ಟರ ಪೈಕಿ ಖೋಡಾ ಮೇಲೂ ಅಕ್ರಮ ಗಣಿಗಾರಿಕೆಯ ಆರೋಪವಿದೆ. 400ಕೋಟಿಯ ಅಕ್ರಮ ಇವರದ್ದಾಗಿದೆ. ಸಾಕಷ್ಟು ಬಾರಿ ಜಾಮೀನು ಅರ್ಜಿ ಹಾಕಿದರೂ, ಅವರ ಅರ್ಜಿಯನ್ನು ಅಲ್ಲಿನ ನ್ಯಾಯಾಲಯ ತಿರಸ್ಕರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+