ಗ್ಯಾಸ್ ಬಿಡುತ್ತಿರುವ ಡಿವಿಎಸ್, ಶೋಭಾ ಕರಂದ್ಲಾಜೆ

ಅಕ್ರಮ ಅಡುಗೆ ಅನಿಲ ಸಂಪರ್ಕ ರದ್ದು: ರಾಜ್ಯದಲ್ಲಿ ಪತ್ತೆಯಾಗಿರುವ 30 ಲಕ್ಷ ಅಡುಗೆ ಅನಿಲ ಸಂಪರ್ಕಗಳನ್ನು ಅಕ್ರಮ ಎಂದು ಪರಿಗಣಿಸಲಾಗಿದ್ದು ಶೀಘ್ರವೇ ಅವುಗಳನ್ನು ಮುಲಾಜಿಲ್ಲದೆ ರದ್ದುಗೊಳಿಸಲಾಗವುದು ಎಂದು ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಆದರೆ ಭಾನುವಾರವಷ್ಟೇ ತವರೂರಿನಲ್ಲಿ ಹೆಣ್ಮಕ್ಕಳ ಅಭಿಮಾಣದಲ್ಲಿ ಮಿಂದೆದ್ದ ಡಿವಿಎಸ್, ನಿಮಗಿನ್ನು ಅಡುಗೆ ಅನಿಲ ಸಂರ್ಕದ ಅಕ್ರಮ ಸಕ್ರಮ ರಗಳೆ ಬೇಡ. ಈಗಿರುವುದೆಲ್ಲ ಸಕ್ರಮ ಸಂಪರ್ಕವೇ. ಎಲ್ ಪಿಜಿ ಗ್ಯಾಸ್ ಕನೆಕ್ಷನ್ ಕೈತಪ್ಪುವ ಭೀತಿ ಬೇಡ ಎಂದು ಅಭಯ ನೀಡಿದ್ದರು. ಈಗ ನೋಡಿದರೆ ಮೇಡಂ ಶೋಭಾ ಹೀಗೆ ಹೇಳಿದ್ದಾರೆ. ಸರಕಾರ ತಕ್ಷಣ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿ, ಗೃಹಿಣಿಯರ ಆತಂಕವನ್ನು ದೂರ ಮಾಡುವುದು ಅತ್ಯಗತ್ಯವಾಗಿದೆ.
ರಾಜ್ಯಾದ್ಯಂತ ಕಳೆದ ಮೂರು ತಿಂಗಳಿನಿಂದ ನಡೆದ ತಪಾಸಣಾ ಕಾರ್ಯದಲ್ಲಿ ಸುಮಾರು 30 ಲಕ್ಷ ಅಕ್ರಮ ಅಡುಗೆ ಅನಿಲ ಸಂಕರ್ಪ ಗಳನ್ನು ಪತ್ತೆ ಮಾಡಲಾಗಿದೆ. ಈ ಪಟ್ಟಿಯನ್ನು ಗ್ಯಾಸ್ ಏಜೆನ್ಸಿಗಳಲ್ಲಿ ಪ್ರಕಟಿಸಿ ಬಳಕೆದಾರರಿಗೆ ಮತ್ತೊಂದು ಅವಕಾಶ ನೀಡಲಾಗುವುದು. ಅನಂತರ ಯಾವುದೇ ಮುಲಾಜಿಲ್ಲದೆ ಸಂಪರ್ಕಗಳನ್ನು ರದ್ದುಗೊಳಿಸಲಾಗುವುದು.
ಅನಧಿಕೃತ ಸಂಪರ್ಕಗಳಿಂದ ನಿರ್ವಹಣೆಯಲ್ಲಿ ತುಂಬಾ ತೊಂದರೆ ಆಗುತ್ತಿದೆ. ಇದರಿಂದಾಗಿ ಹೊಸಬರಿಗೆ ಸಂಪರ್ಕ ಕೊಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದರು.
ಒಂದಕ್ಕಿಂತ ಹೆಚ್ಚು ಅನಿಲ ಸಂಪರ್ಕ ಹಾಗೂ ಪಡಿತರ ಚೀಟಿ ಇರುವ ಅನೇಕ ಪ್ರಕರಣಗಳು ಪತ್ತೆಯಾಗಿವೆ. ಒಂದು ಕುಟುಂಬದಲ್ಲಿ 8ಕ್ಕಿಂತ ಹೆಚ್ಚು ಸದಸ್ಯರಿದ್ದರೆ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಲು ಸರಕಾರದ ತಕರಾರಿಲ್ಲ. ಆದರೆ, ವಾರಸುದಾರರೇ ಇಲ್ಲದ ಅಡುಗೆ ಅನಿಲ ಸಂಪರ್ಕಗಳಿಂದ ಸಬ್ಸಿಡಿ ಹಣ ಕಾಳ ಸಂತೆಕೋರರ ಪಾಲಾಗುತ್ತಿದೆ.
ಈಗ ಪತ್ತೆಯಾಗಿರುವ ಅಕ್ರಮ ಸಂಪರ್ಕಗಳಿಗಿಂತ ಇನ್ನೂ ಹೆಚ್ಚಿನ ಅಕ್ರಮ ಸಂಪರ್ಕಗಳು ಇರಬಹುದು. ಅಥವಾ ಪರಿಶೀಲನೆ ಸಂದರ್ಭದಲ್ಲಿ ಕೆಲ ಮನೆಗಳು ಬಿಟ್ಟು ಹೋಗಿರಬಹುದು. ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗವುದು ಎಂದು ಅವರು ತಿಳಿಸಿದರು.












Click it and Unblock the Notifications