ಬಂಧನ ಭೀತಿಯಲ್ಲಿ ಶೋಭಾ, ಕಟ್ಟಾ ಕಾರಣ

Minister Shobha Karandlaje
ಬೆಂಗಳೂರು, ಆ.23: ಕೆಐಎಡಿಬಿ ಹಗರಣಕ್ಕೆ ಸಂಬಂಧಿಸಿದಂತೆ ಇಟಾಸ್ಕಾ ಕಂಪನಿಯಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಪಡೆದ ಲಂಚದಲ್ಲಿ ಸಚಿವೆ ಶೋಭಾಗೂ ಪಾಲು ಸಿಕ್ಕಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಇಟಾಸ್ಕಾದಿಂದ ಬಂದಿದ್ದ 87 ಕೋಟಿ ರೂ ಕಿಕ್ ಬ್ಯಾಕ್ ನಲ್ಲಿ ಸಚಿವೆ ಶೋಭಾಗೆ 70 ಲಕ್ಷ ರೂ ಋಣ ಸಂದಾಯವಾಗಿತ್ತು. ನಂತರ ಮಾಧ್ಯಮದಲ್ಲಿ ಹಗರಣದ ವರದಿ ನಂತರ ಶೋಭಾ ತಾನು ಪಡೆದ ಹಣ 'ಸಾಲ'ವೆಂದು ತೋರಿಸಲು ತನ್ನ ಅಕೌಂಟಿನಿಂದ ಅಷ್ಟು ಮೊತ್ತ ಮೈನಸ್ ಆಗಿರುವಂತೆ ವ್ಯವಹರಿಸಿದ್ದರು.

ಜಿವಿ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಗೆ ಶೋಭಾರಿಂದ ಹಣ ಮರುಪಾವತಿಯಾಗಿರುವ ದಾಖಲೆಗಳು ಅಧಿಕಾರಗಳ ಕೈಲಿದೆ. ಅಲ್ಲಿಂದ ಮುಂದೆ ಈ ಹಣ ಕಟ್ಟಾಗೆ ಪುನಃ ಪಾವತಿಯಾಗಿದೆ. ಇದನ್ನು ಕಟ್ಟಾಗೆ ಶೋಭಾ ಮರಳಿಸಿದ ಹಣ ಎನ್ನಲು ಸಾಧ್ಯವೇ ಎನ್ನುವ ಬಗ್ಗೆ ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ.

ಹಳೆ ಕೇಸು ರೀ ಓಪನ್: ಕೊಡಗಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನೂರಾರು ಎಕ್ರೆ ಕಾಫಿ ತೋಟ ಖರೀದಿಸಿದ ವ್ಯವಹಾರ, ಬೇನಾಮಿ ಹೆಸರಿನ ಕಂಪನಿ ವ್ಯವಹಾರದ ಬಗ್ಗೆಯೂ ನಿರ್ದೇಶನಾಲಯ ಮಾಹಿತಿ ಸಂಗ್ರಹಿಸುತ್ತಿದೆ. ಶೋಭಾ ಅವರ ಕುಟುಂಬದವರು, ಆಪ್ತರು ನಡೆಸಿರುವ ರಿಯಲ್ ಎಸ್ಟೇಟ್ ಅವ್ಯವಹಾರಗಳ ಬಗ್ಗೆ ಕೂಡಾ ಮಾಹಿತಿ ಸಂಗ್ರಹವಾಗುತ್ತಿದೆ.

ಮನಿ ಲಾಂಡರಿಂಗ್ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಶೋಭಾ ವಿರುದ್ಧ ಕೇಸು ದಾಖಲಿಸಿ, ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇಟಾಸ್ಕಾ ಕಂಪೆನಿಯಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿ ಸಿ ಲೋಕಾಯುಕ್ತ ಪೊಲೀಸರು ತಯಾರಿಸಿರುವ ಚಾರ್ಜ್‌ಶೀಟು ಜಾರಿ ನಿರ್ದೇಶನಾಯಲಯದ ಮೊಕದ್ದಮೆಗೆ ಆಧಾರವಾಗಲಿದೆ.

ಕಾಲ ಕೂಡಿ ಬಂದಿಲ್ಲ: ಇಟಾಸ್ಕಾದಿಂದ ಇಂದು ಬಿಲ್ಡರ್ಸ್ ಎನ್ನುವ ರಿಯಲ್ ಎಸ್ಟೇಟ್ ಕಂಪೆನಿಗೆ 87 ಕೋಟಿ ರೂಪಾಯಿ ಮೊತ್ತವನ್ನು ಅಕ್ರಮವಾಗಿ ಪಾವತಿಸಿದ್ದು ಈ ಪ್ರಕರಣದಲ್ಲಿ ಕಟ್ಟಾ ಮತ್ತು ಶೋಭ ಸೇರಿದಂತೆ ಹಲವರು ಸಿಕ್ಕಿಹಾಕಿಕೊಳ್ಳುವುದು ಖಚಿತ ಎನ್ನಲಾಗಿದೆ.

ಆದರೆ, ಇನ್ನೊಂದು ಮೂಲದ ಪ್ರಕಾರ ಶೋಭಾ ವಿರುದ್ಧ ಕ್ರಮ ಜರುಗಿಸಲು ಇನ್ನೂ ಕಾಲಕೂಡಿ ಬಂದಿಲ್ಲ, ಬಲವಾದ ಸಾಕ್ಷಿ ಆಧಾರ ಸಿಗಬೇಕಿದೆ ಎನ್ನಲಾಗಿದೆ. ಕಟ್ಟಾಗೆ ಸಾಥ್ ನೀಡಲು ಯಡ್ಡಿ ಮೊದಲು ಜೈಲಿಗೆ ಎಂಟ್ರಿ ಕೋಡುತ್ತಾರೋ ಅಥವಾ ಶೋಭಾಜೀ ಹೋಗುತ್ತಾರೋ ಯಾವುದಕ್ಕೂ ಕಾದು ನೋಡೋಣ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+