ಅಣ್ಣಾ ಎಫೆಕ್ಟ್: ಸಂಪುಟ ವಿಸ್ತರಣೆ ಮುಂದೂಡಿದ ಸದಾನಂದ
ಗದಗ,
ಆಗಸ್ಟ್ 23: ದಿಲ್ಲಿಯಲ್ಲಿ ಅಣ್ಣಾ ಹಜಾರೆ ಅವರ ನಿರಶನ ಆರಂಭಗೊಂಡಿದ್ದರಿಂದ ರಾಜ್ಯ ರಾಜಕಾರಣದ ಕೆಲ ಮಹತ್ತರ ಬದಲಾವಣೆಗಳು ವಿಳಂಬವಾಗಿವೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದ್ದಾರೆ. id="toptextpromo">ರೆಡ್ಡಿಗಳನ್ನು
ಸಚಿವ ಸಂಪುಟದಿಂದ ಕೈಬಿಟ್ಟ ಬಗ್ಗೆ ಚರ್ಚೆ ನಡೆದಿದ್ದು, ಈ ಕುರಿತು ಪಕ್ಷದ ವರಿಷ್ಠರೇ ಅಂತಿಮ ನಿರ್ಣಯ ಕೈಗೊಳ್ಳುವರು. ಇಷ್ಟೊತ್ತಿಗೆ ಎಲ್ಲವೂ ಬಗೆಹರಿಯಬೇಕಿತ್ತು. ಆದರೆ ದಿಲ್ಲಿಯಲ್ಲಿ ಅಣ್ಣಾ ಹಜಾರೆ ಅವರ ನಿರಶನ ಆರಂಭಗೊಂಡಿದ್ದರಿಂದ ರಾಜ್ಯ ರಾಜಕಾರಣದ ಕೆಲ ಮಹತ್ತರ ಬದಲಾವಣೆಗಳು ವಿಳಂಬವಾಗಿವೆ ಎಂದರು. id='are-slot-1' class='oiad oi-axt oiadv'> id='top-searched-articles'>ಗದಗ
ಜಿಲ್ಲೆ ಉಸ್ತುವಾರಿಯನ್ನು ವಹಿಸಲು ಸದಾನಂದ ಗೌಡರು ಸಚಿವರಿಗಾಗಿ ಹುಡುಕಾಟ ನಡೆಸಿದ್ದಾರೆ. 'ಗಣಿ ಧಣಿಗಳಿಂದಾಗಿ ಇದು ಕಷ್ಟಕ್ಕೆ ಸಿಕ್ಕಿಕೊಂಡಿದೆ. ಆದರೆ ಸದ್ಯದಲ್ಲೇ ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸೇರಿದಂತೆ ರೆಡ್ಡಿ ಸೋದರರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಅವರು ಸ್ಪಷ್ಟಪಡಿಸಿದರು.











Click it and Unblock the Notifications