ಲಂಚ : ಯಡಿಯೂರಪ್ಪ ವಿರುದ್ಧ ತನಿಖೆಗೆ ಎಡಿಜಿಪಿ ನೇಮಕ

ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯ ಹಿನ್ನೆಲೆಯಲ್ಲಿ ರಾಜ್ಯಪಾಲರಾದ ಹಂಸರಾಜ್ ಎಚ್. ಭಾರದ್ವಾಜ್ ಅವರು ಹೆಚ್ಚಿನ ತನಿಖೆ ನಡೆಸಲು ಲೋಕಾಯುಕ್ತರಿಗೆ ಅನುಮತಿ ನೀಡಿದ್ದರು.
ಅಕ್ರಮ ಗಣಿಗಾರಿಕೆ ವರದಿಯಲ್ಲಿ, ಗಣಿಗಾರಿಕೆಗೆ ಅನುಮತಿ ನೀಡುವಾಗ ಯಡಿಯೂರಪ್ಪ ಮತ್ತು ಅವರ ಮಕ್ಕಳ ಒಡೆತನದ ಪ್ರೇರಣಾ ಟ್ರಸ್ಟ್ 30 ಕೋಟಿ ರು. ಲಂಚ ಪಡೆದಿತ್ತೆಂದು ಆರೋಪಿಸಲಾಗಿದೆ. ತದನಂತರ, ಕರ್ನಾಟಕದಲ್ಲಿ ಸಾಕಷ್ಟು ಪ್ರಹಸನಗಳು ನಡೆದು ಯಡಿಯೂರಪ್ಪನವರು ಬಲವಂತವಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದರು.
ಈ ಹೆಚ್ಚಿನ ತನಿಖೆಯ ಆದೇಶದಿಂದಾಗಿ ಯಡಿಯೂರಪ್ಪನವರೇ ನೇಮಿಸಿರುವ ಲೋಕಾಯುಕ್ತರೊಂದಿಗೆ ಯಡಿಯೂರಪ್ಪನವರ ಹೊಸ ಸಂಘರ್ಷ ಆರಂಭವಾಗುವ ಸಾಧ್ಯತೆಯಿದೆ.












Click it and Unblock the Notifications