'ಸತ್ಯ ಹರಿಶ್ಚಂದ್ರ' ಯಡಿಯೂರಪ್ಪಗೆ ಬಿಪಿ ರೈಸ್: ಆಸ್ಪತ್ರೆಗೆ ದಾಖಲು

'ಅಂಥಾದ್ದೇನು ಆಗಿಲ್ಲ. ಒಂಚೂರು ಬಿಪಿ ರೈಸಾಗಿತ್ತು. ಶುಗರೂ ಟೆಸ್ಟ್ ಮಾಡಿಸಿಕೊಳೋಣ ಅಂತ... ಮಾಮೂಲಿ ತಪಾಸಣೆ ಅಷ್ಟೆ' ಎಂದು ಉಡಾಫೆ ಮಾತನ್ನೂ ಆಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಆರೋಗ್ಯದ ನೆಪವೊಡ್ಡಿ ಆಸ್ಪತ್ರೆ ಪಾಲಾದ ನಿದರ್ಶನಗಳಿಲ್ಲ. ಕೇರಳದ ಕೊಟ್ಟೆಕಲ್ ಆಯುರ್ವೇದ ಧಾಮಕ್ಕೆ ವಿಶ್ರಾಂತಿಗಾಗಿ ದಾಖಲಾಗಿದ್ದರು ಅಷ್ಟೆ. ಹಾಗೆ ನೋಡಿದರೆ ನಾಡಿನ ಆರು ಕೋಟಿ ಕನ್ನಡಿಗರ ಹಾರೈಕೆಯಿಂದ ಯಡಿಯೂರಪ್ಪ ಆರೋಗ್ಯ ತುಂಬಾನೇ ಚೆನ್ನಾಗಿದೆ.
ಆದರೂ ಯಾಕೋ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಶನಿವಾರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆ ಸೇರಿಕೊಂಡಿದ್ದಾರೆ. ಇದು ಹಲವು ವದಂತಿಗಳಿಗೆ ಕಾರಣವಾಗಿದೆ. ನ್ಯಾಯಾಲಯದಲ್ಲಿ ತೀರ್ಮಾನಗಳು ತಮ್ಮ ವಿರುದ್ಧ ಬಂದರೆ ಆಗ ಆರೋಗ್ಯದ ನೆಪವೂ ಸಹ ನೆರವಿಗೆ ಬರಲಿ ಎಂಬ ಮುಂಜಾಗ್ರತೆಯೂ ಈ ಆರೋಗ್ಯ ತಪಾಸಣೆಯ ಹಿಂದೆ ಇದೆ ಎನ್ನಲಾಗುತ್ತಿದೆ.
ಆದರೆ, ಲೋಕಾಯುಕ್ತ ವರದಿಯ 22ನೇ ಅಧ್ಯಾಯವನ್ನು ರದ್ದುಪಡಿಸುವಂತೆ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ. ಇದಲ್ಲದೆ, ಭೂ ಹಗರಣ ಕುರಿತು ಲೋಕಾಯುಕ್ತರು ನೀಡಿರುವ ಸಮನ್ಸ್‌ಗೆ ಉತ್ತರಿಸಲು ಆ. 27 ಅಂತಿಮ ದಿನವಾಗಿದೆ. ಅಲ್ಲದೆ, ಭದ್ರಾ ಕುರಿತು ಎಫ್ಐಆರ್ ಕೂಡ ದಾಖಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಹಜವಾಗಿ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications