ಪರೀಕ್ಷೆ ಅಕ್ರಮ : ವಿಮ್ಸ್ ವೈದ್ಯರ ಮೇಲೆ ಸಿಐಡಿ ದಾಳಿ

ಅಧಿಕೃತ ಮೂಲಗಳ ಪ್ರಕಾರ, ಮಕ್ಕಳ ವಿಭಾಗದ ವೈದ್ಯ ಡಾ. ದತ್ತಾತ್ರೇಯ, ಕಿವಿ ಮತ್ತು ಗಂಟಲು ವಿಭಾಗದ ಡಾ. ಧನುಂಜಯ, ಡಾ. ಭಾಳಭಾಸ್ಕರ್, ಡಾ. ಶಿಲ್ಪಾ ಹಾಗೂ ಡಾ. ಭಾರತಿ, ಡಾ. ವಿಜಯಲಕ್ಷ್ಮಿ, ಸೇರಿ 8ಕ್ಕೂ ಹೆಚ್ಚಿನ ವೈದ್ಯರ ಕ್ಲಿನಿಕ್‌ಗಳು ಮತ್ತು ಮನೆಗಳ ಮೇಲೆ ಸಿಐಡಿ ಸಿಬ್ಬಂದಿ ದಾಳಿ ನಡೆಸಿ ಶೋಧ ನಡೆಸಿದೆ.
ಹಿನ್ನೆಲೆ : ಕಳೆದ ಜನವರಿ 30ರಂದು ವಿಮ್ಸ್‌ನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಬಳ್ಳಾರಿಯ ವಿಮ್ಸ್ ಕಾಲೇಜಿನಲ್ಲಿ ನಡೆದ ಪಿಜಿ ಪರೀಕ್ಷೆಯಲ್ಲಿ ಒಂದೇ ಕೋಣೆಯಲ್ಲಿ ಕುಳಿತು ಪರೀಕ್ಷೆ ಬರೆದ ಎಳು ಜನ ಸಾಮೂಹಿಕ ನಕಲು ಮಾಡಿ ರ‍್ಯಾಂಕ್ ಪಡೆದಿದ್ದಾರೆ ಎಂಬ ಆರೋಪವಿತ್ತು.
ಈ ಸಂಬಂಧ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಗಳು ಬಳ್ಳಾರಿಯಲ್ಲಿ ಪರೀಕ್ಷಾ ಕರ್ತವ್ಯ ನಿರ್ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಎ. ಶ್ರೀನಿವಾಸ ಮೂರ್ತಿ ಅವರನ್ನು ಒಳಗೊಂಡಂತೆ 8ಕ್ಕೂ ಹೆಚ್ಚು ಸಿಬ್ಬಂದಿಯನ್ನು ಫೆಬ್ರವರಿ 26ರಂದು ವಿಚಾರಣೆಗೆ ಒಳಪಡಿಸಿದ್ದರು. ಆದ್ರೆ ವಿಚಾರಣೆಗೆ ಹಾಜರಾದ ಕಾಲೇಜು ಪ್ರಾಂಶುಪಾಲ ನಾವು ಸಾಮೂಹಿಕ ನಕಲು ಮಾಡಲು ಅವಕಾಶ ನೀಡಿಲ್ಲ ಎಂದು ಉತ್ತರ ನೀಡಿದ್ದರು.
ಈ ಕುರಿತು ಲೋಕಾಯುಕ್ತರಿಗೂ ದೂರು ಸಲ್ಲಿಕೆಯಾಗಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ ಮಾಧ್ಯಮಗಳಲ್ಲಿ ಅಗ್ರಸುದ್ದಿಯಾಗಿತ್ತು. ನಾನಾ ತಿರುವು ಪಡೆದಿದ್ದ ಇಡೀ ಪ್ರಕರಣ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಅವರ ಗಮನವನ್ನು ಸೆಳೆದು, ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಸಿಐಡಿ ಪ್ರಕರಣದ ತನಿಖೆ ನಡೆಸಿತ್ತು.












Click it and Unblock the Notifications