ನಾಯ್ಡು ಚೋರ್ ಗುರು ಆಲಿಬಾಬಾಗೆ ಹೋಲಿಕೆ: ಕಟ್ಟಾ ವಕೀಲ

ಬೆಂಗಳೂರು, ಆಗಸ್ಟ್ 19: ಕೆಐಎಡಿಬಿ ಭೂ ಹಗರಣ ಸಂಬಂಧ ಕಟ್ಟಾದ್ವಯರು ಮತ್ತು ಇಟಾಸ್ಕ ನಿರ್ದೇರ್ಶಕ ಶ್ರೀನಿವಾಸ್‌ರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾ. ಜಗನ್ನಾಥನ್ ಅವರ ನ್ಯಾಯಪೀಠ ಗುರುವಾರ ನಡೆಸಿತು. ಆ ಸಂದರ್ಭದಲ್ಲಿ ಕೆಲವು ಸ್ವಾರಸ್ಯಕರ ಚರ್ಚೆಗಳೂ ನಡೆದಿವು. ಕಟ್ಟಾ ಸುಬ್ರಮಣ್ಯರನ್ನು ಚೋರ್ ಗುರು ಆಲಿಬಾಬಾಗೆ ಹೋಲಿಸಿದ ಪ್ರಸಂಗವೂ ನಡೆಯಿತು.

ಪರ-ವಿರೋಧ ವಾದ: ಕೈಗಾರಿಕೆ ಇಲಾಖೆಯ ಹೈ ಲೆವೆಲ್ ಕಮಿಟಿ (HLC) ಇಟಾಸ್ಕ ಕಂಪನಿಗೆ 325 ಎಕರೆ ಭೂಮಿ ನೀಡಿದೆ. ಸಮಿತಿಯು ಮುಖ್ಯಮಂತ್ರಿ ನೇತೃತ್ವದಲ್ಲಿರುವುದರಿಂದ ಅವರೇ ಸಮಿತಿಯ ನಿರ್ಧಾರಗಳಿಗೆ ಬಾಧ್ಯಸ್ಥರಾಗುತ್ತಾರೆ. ಇಟಾಸ್ಕ ಕಂಪನಿಗೆ 325 ಎಕರೆ ಭೂಮಿ ಮಂಜೂರಾಗಿದ್ದು 2006ರಲ್ಲಿ.

ಆ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ನಾಡಿನ ಮುಖ್ಯಮಂತ್ರಿಯಾಗಿದ್ದರಿಂದ HLC ಮುಖ್ಯಸ್ಥರೂ ಆಗಿದ್ದರು. ಆಗ ಸಿಎಂ ಅನುಮತಿಯಂತೆಯೇ ಭೂಮಿ ಮಂಜೂರು ಮಾಡಲಾಗಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೇವಲ ಸಮಿತಿ ಸದಸ್ಯರಾಗಿದ್ದರು ಎಂದು ಕಟ್ಟಾ ಪರ ವಕೀಲರು ಪ್ರತಿವಾದ ಮಂಡಿಸಿದರು.

ಕಟ್ಟಾದ್ವಯರ ಪರ ಪ್ರತಿವಾದ ಮುಂದುವರಿಸಿದ ವಕೀಲ ಸಿವಿ ನಾಗೇಶ್ ಅವರು ಭೂಮಿ ಮಂಜೂರಾತಿಯಲ್ಲಿ ಕಟ್ಟಾ ಪಾತ್ರವಿಲ್ಲ. ಪ್ರಕರಣವು ಆಲಿಬಾಬಾ ಮತ್ತು 40 ಕಳ್ಳರ ಕಥೆಯಂತಾಗಿದೆ. ಆಲಿಬಾಬಾ (ಕಟ್ಟಾ)ರನ್ನು ಆರೋಪಿಯಾಗಿಸಿ ಉಳಿದ 40 ಕಳ್ಳರನ್ನು ಬಿಡಲಾಗಿದೆ ಎಂದು ಕಟ್ಟಾ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಭೂಮಿ ನೀಡಿದ ರೈತರು ತಕ್ಕ ಪರಿಹಾರ ಪಡೆದಿದ್ದಾರೆ. ರೈತರಾಗಲಿ, ಉನ್ನತ ಸಮಿತಿ ಅಥವಾ ಯಾವುದೆ ಸರಕಾರಿ ಸಂಸ್ಕೆಯಾಗಲಿ ಕಟ್ಟಾ ವಿರುದ್ಧ ದೂರು ನೀಡಿಲ್ಲ. ಬದಲಾಗಿ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿ, ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಚಿವರಾಗಿದ್ದ ಕಟ್ಟಾರನ್ನು ಸಿಲುಕಿಸಿದ್ದಾರೆ ಎಂದು ಕಟ್ಟಾ ಪರ ವಕೀಲರು ಹೇಳಿದರು.

ಪ್ರಕರಣದ ಸಂಬಂಧ ಈ ಹಿಂದೆ ದಾಖಲಿಸಿದ್ದ 16 ಸಾವಿರ ಪುಟಗಳನ್ನೊಳಗೊಂಡು 25 ಸಂಪುಟಗಳ ದೋಷಾರೋಪ ಪಟ್ಟಿಯನ್ನು ಲೋಕಾಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+