ಹೆಣ್ಣು ಮಗು ಹುಟ್ಟಿದ ಕೊರಗಿನಲ್ಲಿ ತಂದೆ ಆತ್ಮಹತ್ಯೆ
ಜೈಪುರ,
ಆ.19: ಅಯ್ಯೋ ಮತ್ತೆ ಹೆಣ್ಣು ಮಗು ಹುಟ್ಟಿದೆ ಎಂದು ಕೊರಗಿದ ವ್ಯಕ್ತಿಯೊಬ್ಬ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಸತತವಾಗಿ ನಾಲ್ಕನೇ ಬಾರಿ ಕೂಡಾ ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ದುಃಖಿತನಾದ 30 ವರ್ಷದ ತಂದೆ ಕೋಟ ಬಳಿಯ ಚಂಬಲ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. id="toptextpromo">ಮೃತ
ವ್ಯಕ್ತಿಯನ್ನು ರಂಜೀತ್ ಕುಮಾರ್ ಎಂದು ಗುರುತಿಸಲಾಗಿದ್ದು, ಕೋಟಾದ ನಯಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ ಪುರದ ನಿವಾಸಿಯಾಗಿದ್ದಾನೆ. ನಾಲ್ಕನೆ ಮಗು ಅಳುವಿನ ಸದ್ದು ಕಿವಿಗೆ ಸರಿಯಾಗಿ ಬೀಳುವ ಮೊದಲೇ ಖಿನ್ನನಾದ ರಂಜೀತ್ ಅಳುಮೋರೆ ಹೊತ್ತು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾನೆ. ನಂತರ ಅವರ ಶವ ನದಿಯಲ್ಲಿ ಸಿಕ್ಕಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗಂಡು
ಮಗು ಆಕಾಂಕ್ಷಿಯಾಗಿದ್ದ ರಂಜೀತ್ ಆತ್ಮಹತ್ಯೆಗೆ ಬೇರೆ ಯಾವುದೇ ಕಾರಣ ಇರಲೂ ಸಾಧ್ಯವಿಲ್ಲ. ಹೆಣ್ಣು ಮಗು ಜನಿಸಿದ ದುಃಖದಲ್ಲಿ ಈ ರೀತಿ ಆತುರದ ನಿರ್ಧಾರ ಕೈಗೊಂಡಿರುವ ಸಾಧ್ಯತೆಯಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications