ಅಣ್ಣಾ ಪ್ರಭಾವ: ವೋಟಿಗಾಗಿ ನೋಟು ಲಂಚ ವಾಪಾಸ್

Anna hazare effect in Pune
ಪುಣೆ ಆ.19: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಸಾರಿರುವ ಸಮರ ಹಾಗೂ ದೇಶದಾದ್ಯಂತ ಸಿಕ್ಕಿರುವ ಬೆಂಬಲ ಕಂಡು ಬೆರಗಾದ ಪುಣೆಯ ಎರಡು ಗ್ರಾಮ ಪಂಚಾಯಿತಿಗಳು ಲಂಚಮುಕ್ತವಾಗುವತ್ತ ಹೆಜ್ಜೆ ಇರಿಸಿವೆ.

ಅಣ್ಣಾ ಪರ ಘೋಷಣೆ ಕೂಗುತ್ತಾ, ಬಾವುಟ ಹಿಡಿದು ಪ್ರತಿಭಟನೆ ನಡೆಸುವುದರ ಬದಲು ಇತ್ತೀಚೆಗೆ ಎಪಿಎಂಸಿ ಚುನಾವಣೆಯಲ್ಲಿ ಪಡೆದಿದ್ದ ವೋಟಿಗಾಗಿ ನೋಟುಗಳನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.

ಶಿರೂರು ತಾಲೂಕಿನ ಜಂಬೂತ್ ಗ್ರಾಮ ಪಂಚಾಯಿತಿ ಸದಸ್ಯರು ಇತ್ತೀಚೆಗೆ ನಡೆದಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(APMC) ಚುನಾವಣೆಯಲ್ಲಿ ಲಂಚ ಪಡೆದು ತಮಗೆ ಬೇಕಾದ ಅಭ್ಯರ್ಥಿಗೆ ವೋಟು ನೀಡಿದ್ದರು.

ಇತ್ತೀಚೆಗೆ ಸಭೆ ಸೇರಿದ ಪಂಚಾಯಿತಿ ಸದಸ್ಯರು ಅಣ್ಣಾರಿಂದ ನಾವು ಪಾಠ ಕಲಿತ್ತಿದ್ದೇವೆ. ನಮ್ಮ ಪಂಚಾಯಿತಿ ಸದಸ್ಯರೆಲ್ಲ ತಾವು ಪಡೆದ ಲಂಚದ ಹಣವನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ ಇದನ್ನು ಶಾಲೆ ನಿರ್ಮಾಣಕ್ಕೆ ಬಳಸುತ್ತೇವೆ ಎಂದು ಪಂಚಾಯಿತಿ ಮುಖ್ಯಸ್ಥ ಬಾಲಕೃಷ್ಟ ಕಡ್ ಹೇಳಿದ್ದಾರೆ.

ಜಂಬೂತ್ ಗ್ರಾಮಸ್ಥರ ನಿರ್ಣಯದಿಂದ ಪ್ರೇರಿತರಾದ ಕವತೆ-ಯಮೈ ಗ್ರಾಮಸ್ಥರು ತಾವು ಕೂಡಾ ಲಂಚ ಮುಟ್ಟುವುದಿಲ್ಲ. ಈವರೆಗೂ ಪಡೆದ ಹಣವನ್ನು ಸಂಗ್ರಹಿಸಿ ಗ್ರಾಮದಲ್ಲಿ ದೇಗುಲ ನಿರ್ಮಿಸುವುದಾಗಿ ಹೇಳಿದ್ದಾರೆ. ಅಣ್ಣಾ ಚಳವಳಿಯ ಫಲ ಅವರ ತವರು ರಾಜ್ಯದಲ್ಲೇ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+