ಮಾನನಷ್ಟ ಮೊಕದ್ದಮೆ: ವಾರಪತ್ರಿಕೆ ಸಂಪಾದಕನ ಬಂಧನ
ಕೆಜಿಎಫ್,
ಆ. 18: 'ರೀಯಲ್ ಸ್ಟೋರಿ' ತಮಿಳು ವಾರಪತ್ರಿಕೆಯ ಸಂಪಾದಕ ಎನ್. ಶ್ರೀನಿವಾಸ್‌ರನ್ನು ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಬೆಮೆಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. id="toptextpromo">ಕೇಂದ್ರ
ಸರಕಾರ ಸ್ವಾಮ್ಯದ ಬಿಇಎಂಎಲ್ ಲಿಮಿಟೆಡ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವಿ.ಆರ್.ಎಸ್. ನಟರಾಜನ್ ವಿರುದ್ಧ ರೀಯಲ್ ಸ್ಟೋರಿ ತಮಿಳು ವಾರಪತ್ರಿಕೆಯಲ್ಲಿ ಕಳೆದ ಮೂರು ಸಂಚಿಕೆಗಳಲ್ಲಿ ಇಲ್ಲಸಲ್ಲದ ವರದಿ ಹಾಗೂ ಮಾನನಷ್ಟವಾಗುವಂತಹ ವ್ಯಂಗ್ಯ ಚಿತ್ರಗಳನ್ನು ಮುದ್ರಿಸಿ ಹಣ ವಸೂಲಿಗಾಗಿ ಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಶ್ರೀನಿವಾಸ್‌ರನ್ನು
ಬಂಧಿಸುವಂತೆ ಬಿಇಎಂಎಲ್ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರು ಕೆಜಿಎಫ್ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಬೆಮೆಲ್ ಪೊಲೀಸ್ ಠಾಣಾ ಪಿಎಸ್‌ಐ ಮಧುಸೂದನ್ ವಾರಪತ್ರಿಕೆಯ ಸಂಪಾದಕ ಶ್ರೀನಿವಾಸ್‌ರನ್ನು ಬಂಧಿಸಿ ಕೆಜಿಎಫ್ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.











Click it and Unblock the Notifications