ಬೃಹತ್ ಬೆಂಗಳೂರಿನಲ್ಲಿ ಮಹಾಪಾಪಿಯ ನಿಧನ

ಇತ್ತಿತ್ತಲಾಗಿ ಬೆಂಗಳೂರಿನಲ್ಲಿ ಮಳೆ ಕಡಿಮೆ ಆಗಿದೆ. ಅದರಲ್ಲೂ ಕಳೆದ 10-15 ವರ್ಷದಲ್ಲಿ ತುಂಬಾ ಕಡಿಮೆನೇ. ಒಟ್ಟಾರೆ ಮಳೆ ಪ್ರಮಾಣ ಸಮರ್ಪಕ ಇರಬಹುದು. ಆದರೆ, ಮಳೆಗಾಲ ಎನ್ನುವುದೇ ಇಲ್ಲವಾಗಿತ್ತು.
ಈ ಬಾರಿ ಇದೇನಿದು ವಿಶೇಷ. ಕಳೆದ 5-6 ವಾರಗಳಿಂದ ಸದಾ ಮೋಡ, ಆಗಾಗ ಮಳೆ. ಮಳೆ ಸುರಿಯದ ದಿನವೇ ಇಲ್ಲ ಎನ್ನಬಹುದು. ಆಗಸ್ಟ್ 15 ರ ನಂತರ ಪ್ರತಿ ದಿನರಾತ್ರಿ ಮಳೆ ಹುಯ್ಯುತ್ತಲೇ ಇದೆ.
ನನಗಂತೂ ಸಂತೋಷವಾಗಿದೆ. ಮಳೆಗಾಗಿ ಅಲ್ಲ, ಮಳೆಗಾಲ ಬೆಂಗಳೂರಿಗೆ ವಾಪಸ್ಸು ಬಂದುದಕ್ಕಾಗಿ ಖುಷಿಯಾಗಿದೆ. ಇದೇನು ಚಿಕ್ಕಮಂಗಳೂರೋ, ದೊಡ್ಡಮಂಗಳೂರೋ, ತೀರ್ಥಹಳ್ಳಿಯೋ ಎಂಬ ಭಾವನೆ ಮೂಡುತ್ತಿದೆ.
ಈ ಹವಾಮಾನ ಬೆಳವಣಿಗೆಗೆ ಕಾರಣ, ಬೃಹತ್ ಬೆಂಗಳೂರಿನಲ್ಲಿ ಖಂಡಿತ ಯಾರೋ ಒಬ್ಬ ದೊಡ್ಡ ಪಾಪಿ ಸತ್ತಿರಬೇಕು ಅಥವಾ ಪುಣ್ಯಾತ್ಮ ಹುಟ್ಟಿರಬೇಕು. ಮಳೆಯಿಂದ ಉಂಟಾಗುವ ಸಹಜ ಕಿರಿಕಿರಿ, ಒದ್ದೆ ಮುದ್ದೆ, ಕೊಚ್ಚೆ ಪಾಚಿಯನ್ನು ಸಹಿಸಿಕೊಳ್ಳೋಣ, ಏನೆನ್ನುವಿರೋ ನೀವು? ಬೆಂಗಳೂರಿಗೆ ನಿನ್ನೆ ಮೊನ್ನೆ ಬಂದಿಳಿದವರು.
Don't pray when it rains if you don't pray when the sun shines - Satchel Paige












Click it and Unblock the Notifications