ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪವಾಡ: ಕದ್ದ ಮಾಲು ವಾಪಸ್ ಮಾಡಿದ ಕಳ್ಳ

kukke-subrahmanya-thief-returns-currency
ಸುಬ್ರಹ್ಮಣ್ಯ, ಆಗಸ್ಟ್ 18: 'ಸುಬ್ರಹ್ಮಣ್ಯ ಸ್ವಾಮಿಗೆ ನಮಸ್ಕಾರ. ನಾನು ಮಾಡಿದ್ದು ದೊಡ್ಡ ತಪ್ಪು. ಕುಕ್ಕೆಶ್ರೀ ಸ್ವಾಮಿಯೇ ನನಗೆ ಶಿಕ್ಷೆ ಕೊಡು. ಅದನ್ನು ತಿದ್ದಿಕೊಳ್ಳುತ್ತೇನೆ. ಇತಿ - ಟಿ.ಜಿ.ರಾಜು, ಕ್ಯಾತಸಂದ್ರ, ತುಮಕೂರು'

..ಎಂಬ ಒಕ್ಕಣೆಯ ಪತ್ರದೊಂದಿಗೆ ಸುಬ್ರಹ್ಮಣ್ಯ ದೇವಳದ ವಸ್ತು ಸಂಗ್ರಹಾಲಯದ ಮೇಲ್ವಿಚಾರಕರ ವಿಳಾಸಕ್ಕೆ ಕಳವು ಮಾಡಿದ 12 ನೋಟುಗಳ ಸಹಿತ ಪತ್ರವೊಂದು ಬುಧವಾರ ಅಂಚೆ ಮೂಲಕ ದೇವಸ್ಥಾನ ತಲುಪಿದೆ.

ಇದೇ ವಿಳಾಸಕ್ಕೆ ಇದೇ ವ್ಯಕ್ತಿಯಿಂದ ಮಂಗಳವಾರ ಎರಡು ಬೇರೆ ಬೇರೆ ಪತ್ರಗಳು ಬಂದಿದ್ದು ಅದರಲ್ಲಿ 15 ಮತ್ತು 14 ಹೀಗೆ ಒಟ್ಟು 29 ನೋಟುಗಳಿದ್ದವು. ಇವೆಲ್ಲವೂ ಕಳೆದ ವಾರ ರಾತ್ರಿ ವೇಳೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾಚನಾಲಯದ ಬಾಗಿಲ ಬೀಗ ಮುರಿದು ಒಳಹೊಕ್ಕು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಅಮೂಲ್ಯ ಹಾಗೂ ಅಪೂರ್ವ ಹಳೆ ಕಾಲದ ದೇಶೀ ಮತ್ತು ವಿದೇಶೀ ಕರೆನ್ಸಿಗಳೇ ಆಗಿವೆ. ಕರೆನ್ಸಿ ಕಳವು ಆಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಕಳವು ಮಾಡಿದ ಆರೋಪಿಯು ಕಳವು ಮಾಡಿದ 41 ಕರೆನ್ಸಿಗಳನ್ನು ಮತ್ತೆ ಸ್ವಸ್ಥಾನಕ್ಕೆ ಹಿಂತಿರುಗಿಸಿರುವುದು ಸಂತಸ ತಂದಿದೆ. ಕಳವು ಮಾಡಿದ ಮೇಲೆ ತಾನು ಮಾಡಿದ ಕಳವಿಗಾಗಿ ಪಶ್ಚಾತ್ತಾಪ ಪಟ್ಟು ಅವೆಲ್ಲವನ್ನೂ ಹಿಂತಿರುಗಿಸಿದ್ದಾನೆ! ಲೋಕ್ ಪಾಲ್ ಆಂದೋಳನ ಮತ್ತು ಅಣ್ಣಾ ಹಜಾರೆ ಚಳವಳಿಯಿಂದ ಪ್ರೇರಿತನಾಗಿ ಈತನೀಗ ವಾಸುದೇವನಾದನೋ? ತಿಳಿದುಬಂದಿಲ್ಲ!

ಕಳವು ಮಾಡಿದ ವ್ಯಕ್ತಿ ಯಾರು ಎನ್ನುವುದು ಮುಖ್ಯವಲ್ಲ. ಆದರ ದೇವಳದದಿಂದ ಕದ್ದ ವಸ್ತುಗಳನ್ನು ವಾರದೊಳಗೆ ಮತ್ತೆ ಹಿಂತಿರುಗಿಸಿರುವುದು ಕಳವು ಪ್ರಕರಣದ ಇತಿಹಾಸದಲ್ಲಿ ಹೊಸದಾಗಿದೆ. ವಾಚನಾಲಯದ ಮೇಲ್ವಿಚಾರಕರು ತಮ್ಮ ಹೆಸರಿಗೆ ಬಂದ ಪತ್ರ ಹಾಗೂ ಎಲ್ಲಾ ಕರೆನ್ಸಿಗಳನ್ನು ದೇವಳದ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ.ಕಾಳಿ ಅವರಿಗೆ ಒಪ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+