ಯಡಿಯೂರಪ್ಪ ಪಲಾಯನ, ಅಣ್ಣಾ ಬೆಂಬಲಕ್ಕೆ ಶಿವಣ್ಣ

ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿ ತಾನೂ ಗುರುವಾರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು.
ಇನ್ನು, ಅಣ್ಣಾವ್ರ ಮಗ ಶಿವರಾಜ್ ಕುಮಾರ್ ಫ್ರೀಡಂ ಪಾರ್ಕಿಗೆ ಬಂದು ಅಣ್ಣಾ ಆಂದೋಲನಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು. ಗಮನಾರ್ಹವೆಂದರೆ ಖ್ಯಾತ ನಟ ಖುದ್ದು ಫ್ರೀಡಂ ಪಾರ್ಕಿಗೆ ಬಂದಾಗ ಯಾವುದೇ ಟ್ರಾಫಿಕ್ ಜಾಮ್ ಆದ ಘಟನೆ ನಡೆದಿಲ್ಲ.
'ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಅಣ್ಣಾ ಹಜಾರೆ ಅವರು ದೇವರ ರೂಪದಲ್ಲಿ ನಮ್ಮ ಹಿತ ಕಾಯಲು ಬಂದಿದ್ದಾರೆ' ಎಂದು ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಪ್ರಾಣ ನೀಡುವುದಕ್ಕೂ ತಾವು ಸಿದ್ಧ ಎಂದು ಶಿವಣ್ಣ ಇದೇ ಸಂದರ್ಭದಲ್ಲಿ ಘೋಷಿಸಿದರು.
ಅತ್ತ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅಣ್ಣಾ ಇನ್ನೂ ಬಂಧಿಯಾಗಿಯೇ ಇದ್ದಾರೆ. ಇಂದೂ ಕೂಡ ಅವರು ತಿಹಾರ್ ಜೈಲಿನಲ್ಲೇ ಇದ್ದು, ಶುಕ್ರವಾರದ ವೇಳೆಗೆ ಸರಕಾರ ಬೇಷರತ್ ಅವಕಾಶ ನೀಡಿದರೆ ರಾಮಲೀಲಾ ಮೈದಾನದಲ್ಲಿ ಉಪವಾಸ ಕುಳಿತುಕೊಳ್ಳುವುದಾಗಿ ಅಣ್ಣಾ ಪಟ್ಟು ಹಿಡಿದಿದ್ದಾರೆ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ಫ್ರೀಡಂ ಪಾರ್ಕಿನಲ್ಲಿ ತಿಳಿಸಿದ್ದಾರೆ.












Click it and Unblock the Notifications