ಅಣ್ಣಾ ಬಿಡುಗಡೆ; ರಾಮಲೀಲಾದಲ್ಲಿ ಉಪವಾಸ ಮುಂದುವರಿಕೆ
ನವದೆಹಲಿ,
ಆಗಸ್ಟ್ 18: ಗಾಂಧಿವಾದಿ ಅಣ್ಣಾ ಹಜಾರೆ ಅವರು ಜೈಲಿನಿಂದ ಹೊರಬರಲು ಸಮ್ಮತಿಸಿದ್ದಾರೆ. ಮಂಗಳವಾರ ತಿಹಾರ ಜೈಲಿನಲ್ಲಿ ಬಂಧಿಯಾದ ಅಣ್ಣಾ ಗುರುವಾರ ಮಧ್ಯಾಹ್ನದ ವೇಳೆಗೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಅಣ್ಣಾ ಆಪ್ತರು ಪ್ರಕಟಿಸಿದ್ದಾರೆ. ಬೇಷರತ್ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ಬಯಸಿ ಅಣ್ಣಾ ಪಟ್ಟು ಹಿಡಿದಿದ್ದರು. ತಡರಾತ್ರಿ ನಡೆದ ಸಂಧಾನದಲ್ಲಿ ಪೊಲೀಸರು ಅಣ್ಣಾರ ಬಹುತೇಕ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದ್ದಾರೆ. id="toptextpromo">ಜೈಲಿನಿಂದ
ನೇರವಾಗಿ ರಾಮಲೀಲಾ ಮೈದಾನ ತಲುಪಿ ಮಧ್ಯಾಹ್ನ 3 ಗಂಟೆಯಿಂದ ಪೂರ್ವ ಯೋಜಿತ ರೀತಿಯಲ್ಲಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ. ಈ ಮಧ್ಯೆ, ಅಣ್ಣಾ ಮೂರು ದಿನಗಳಿಂದ ತಿಹಾರ್ ಜೈಲಿನಲ್ಲೇ ಉಪವಾಸ ನಡೆಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಣ್ಣಾರ
ಬೇಡಿಕೆಗಳನ್ನು ದೆಹಲಿ ಪೊಲೀಸರು ಬಹುತೇಕ ಒಪ್ಪಿಕೊಂಡಿದ್ದಾರೆ. ರಾಮಲೀಲಾ ಮೈದಾನದಲ್ಲಿ 15 ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಸರಕಾರ ಸಮ್ಮತಿ ಸೂಚಿಸಿದೆ. ಇದಕ್ಕೂ ಮುನ್ನ ಅಣ್ಣಾ ಬಂಧನದಿಂದ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿ ಸರಕಾರಕ್ಕೆ ತೀವ್ರ ಮುಜುಗರವನ್ನುಂಟುಮಾಡಿತ್ತು. ಅಣ್ಣಾ ಜತೆಗೂಡಿ ಅವರ ಬೆಂಬಲಿಗರೂ ಇದೇ ವೇಳೆ ಬಿಡುಗಡೆಯಾಗಲಿದ್ದಾರೆ.











Click it and Unblock the Notifications