ರವಿಶಂಕರ ಗುರೂಜಿಯಿಂದ ಕಾಂಗ್ರೆಸ್ ಹಿಗ್ಗಾಮುಗ್ಗಾ ತರಾಟೆಗೆ
ನವದೆಹಲಿ,
ಆಗಸ್ಟ್ 17: ಆರ್ಟ್ ಆಫ್ ಲಿವಿಂಗ್ ಕೇಂದ್ರದ ಶ್ರೀ ರವಿಶಂಕರ ಗುರೂಜಿ ಅವರು ಬುಧವಾರ ಮಧ್ಯರಾತ್ರಿ ನವದೆಹಲಿಯನ್ನು ತಲುಪಿದ್ದು, ಗಾಂಧಿವಾದಿ ಅಣ್ಣಾ ಹಜಾರೆ ಅವರನ್ನು ತಿಹಾರ್ ಜೈಲಿನಲ್ಲಿ ಭೇಟಿಯಾಗಿ ಅಣ್ಣಾಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. id="toptextpromo">ಇದೇ
ವೇಳೆ, ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶ್ರೀ ರವಿಶಂಕರ ಗುರೂಜಿ, ಪಕ್ಷದ ದ್ವಿಮುಖ ನೀತಿ ಬಗ್ಗೆ ಕಿಡಿಕಾರಿದರು. 'ಒಂದು ದಿನ ಅಣ್ಣಾರ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಬೆಂಬಲಿಸಿ ಜೈ ಅನ್ನುತ್ತೀರಿ. ಮತ್ತೊಂದು ದಿನ ಅವರನ್ನು ತಿಹಾರ್ ಜೈಲಿಗೆ ತಳ್ಳುತ್ತೀರಿ. ಇದೇನು ಸಂಸ್ಕೃತಿ, ಇದ್ಯಾವ ನ್ಯಾಯ' ಎಂದು ಗುರೂಜಿ ಪಕ್ಷವನ್ನು ಟೀಕಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಅಣ್ಣಾರನ್ನು
ಒಳಗೆ ಹಾಕಿದ ಸರಕಾರದ ಕ್ರಮವನ್ನು ಯಾವ ಹುಚ್ಚ ತಾನೇ ಸರಿ ಎನ್ನುತ್ತಾನೆ?' ಎಂದು ಗುರೂಜಿ ಪ್ರತಿಕ್ರಿಯಿಸಿದ್ದಾರೆ. ಗುರೂಜಿ ಮೊದಲಿನಿಂದಲೂ ಅಣ್ಣಾರ ಭ್ರಷ್ಟಾಚಾರ ವಿರೋಧಿ ಆಂದೋಲವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಶ್ರೀ ರವಿಶಂಕರ್ ಅವರು ಈ ಬಾರಿ ಅಣ್ಣಾ ಮತ್ತು ಸರಕಾರದ ಮಧ್ಯೆ ಸಂಧಾನಕಾರರಾಗುತ್ತಾರೆ ಎಂಬ ಕುತೂಹಲ ಮೂಡಿದೆ.











Click it and Unblock the Notifications