ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಶೆಹಲಾ ಮಸೂದ್ ಹತ್ಯೆ
ಭೋಪಾಲ,
ಆಗಸ್ಟ್ 17: ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹಲಾ ಮಸೂದ್ ಅವರನ್ನು ಮನೆಯ ಎದುರೇ ದುಷ್ಕರ್ಮಿಗಳು ಮಂಗಳವಾರ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪ್ರತಿಷ್ಠಿತ ಕೊಹ್-ಎ-ಫಿಝಾ ಪ್ರದೇಶದಲ್ಲಿರುವ ಅವರ ಮನೆಯ ಬಳಿ ಕಾರಿನಲ್ಲಿ ಕುಳಿತಿದ್ದಾಗ ಶೆಹಲಾ ಅವರ ಕುತ್ತಿಗೆಗೆ ಗುಂಡು ಹಾರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆದರ್ಶ ಕಟಿಯಾರ್ ತಿಳಿಸಿದ್ದಾರೆ. id="toptextpromo">'ಭ್ರಷ್ಟಾಚಾರ
ವಿರುದ್ಧ ಭಾರತ' ಸಂಘಟನೆಯ ಮಧ್ಯಪ್ರದೇಶ ಘಟಕದ ನೇತೃತ್ವ ವಹಿಸಿದ್ದ ಶೆಹಲಾ, ಏಪ್ರಿಲ್‌ನಲ್ಲಿ ಅಣ್ಣಾ ಹಜಾರೆ ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾಗ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ವ್ಯಾಪಕ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಾಗಿ ಸೋಮವಾರವಷ್ಟೇ ವಾಗ್ದಾನ ಮಾಡಿದ್ದ ಅವರು, ಇದಕ್ಕೆ ಪೂರಕವಾಗಿ ಸಾಕಷ್ಟು ದಾಖಲೆ ತಮ್ಮ ಬಳಿ ಇರುವುದಾಗಿ ಹೇಳಿದ್ದರು. id='are-slot-1' class='oiad oi-axt oiadv'> id='top-searched-articles'>ಶೆಹಲಾ,
ವನ್ಯಜೀವಿ ಸಂರಕ್ಷಣೆ ಸಹಿತ ಹಲವು ಯೋಜನೆಗಳ ಸಂಬಂಧ ಕೆಲಸ ಮಾಡುತ್ತಿದ್ದರು. ಮಧ್ಯಪ್ರದೇಶದ ಹಲವು ರಕ್ಷಿತಾರಣ್ಯಗಳಲ್ಲಿ ಹುಲಿಗಳ ಸಾವಿನ ಕುರಿತಾಗಿ ಧ್ವನಿಯೆತ್ತುವಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು. ಕಠಿಣ ಪರಿಶ್ರಮಿಯೆನ್ನಲಾಗಿದ್ದ ಶೆಹಲಾ, ಕಾರ್ಯಕ್ರಮ ಸಂಯೋಜನೆ ಮತ್ತಿತರ ಕೆಲಸಗಳನ್ನು ಮಾಡುವ 'ಮಿರಾಕಲ್ಸ್" ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು.











Click it and Unblock the Notifications