ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ

N Santosh Hegde
ಬೆಂಗಳೂರು, ಆ.16: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯ ಬಂಧನಕ್ಕೆ ನಿಕಟಪೂರ್ವ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದ್ದಾರೆ.

ಅಣ್ಣಾ ಬಂಧನ ವಿರೋಧಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮನಸ್ಸಿಲ್ಲ. ದುರ್ಬಲ ಮಸೂದೆಗೆ ಯುಪಿಎ ಸರಕಾರ ಮುಂದಾಗಿದೆ ಎನ್ನುವುದಕ್ಕೆ ಅಣ್ಣಾ ಬಂಧನ ಸಾಕ್ಷಿ ಎಂದು ಕಿಡಿಕಾರಿದರು.

ಕೇಂದ್ರ ಸರಕಾರ ಅಣ್ಣಾ ಬಂಧನಕ್ಕೆ ಸೂಕ್ತ ಕಾರಣಗಳನ್ನು ನೀಡಿಲ್ಲ. ಈ ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ಚಳವಳಿ ನಡೆಸಲು ಅವಕಾಶವೇ ಇಲ್ಲ. ಬೇಕಾಬಿಟ್ಟಿ ಬಂಧಿಸಲು ಅಣ್ಣಾ ಏನು ಉಗ್ರಗಾಮಿಯೇ? ಎಂದು ಹೆಗ್ಡೆ ಪ್ರಶ್ನಿಸಿದ್ದಾರೆ.

ಜನಲೋಕಪಾಲ್ ಮಸೂದೆ ಯಾವುದೆ ವ್ಯಕ್ತಿ ಅಥವಾ ಸರ್ಕಾರದ ವಿರುದ್ದ ಅಲ್ಲ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವೇ ಅದರ ಮುಖ್ಯ ಉದ್ದೇಶ. ಅಣ್ಣಾ ಹಜಾರೆ ಬಂಧನದಿಂದ ಈ ಹೋರಾಟ ನಿಲ್ಲುತ್ತೆ ಅಂತ ಸರಕಾರ ಭಾವಿಸಿರಬಹುದು. ತಾರ್ಕಿಕ ಅಂತ್ಯ ಕಾಣುವರೆಗೆ ಈ ಹೋರಾಟ ನಿಲ್ಲುವುದಿಲ್ಲ.

ಪ್ರತಿಭಟನೆಯಲ್ಲಿ ಯುವಕರು ಉದ್ವೇಗಗೊಳ್ಳದೇ ಶಾಂತ ರೀತಿಯಲ್ಲಿ ಪಾಲ್ಗೊಳ್ಳಿ, ಇಂತಹ ಹೋರಾಟಗಳನ್ನು ದಾರಿ ತಪ್ಪಿಸಲು ಕೆಲವು ಶಕ್ತಿಗಳು ಹವಣಿಸುತ್ತಿರುತ್ತವೆ. ಅಂಥವರಿಗೆ ಅವಕಾಶ ನೀಡಬೇಡಿ ಎಂದು ಅವರು ಯುವಕರಲ್ಲಿ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+