ಸಂಸತ್ತಿನಲ್ಲಿ ಜನ ಲೋಕಪಾಲ ಮಸೂದೆ ಮಂಡಿಸುವೆ: ವರುಣ್

ಅಣ್ಣಾ ಅವರ ನಿರಶನಕ್ಕೆ ತನ್ನ ಮನೆಯನ್ನು ಬಿಟ್ಟುಕೊಡಲು ಸಿದ್ಧವಾಗಿದ್ದ ಉತ್ತರ ಪ್ರದೇಶದ ಪಿಲಿಭಿತ್ ನ ಸಂಸದ ವರುಣ್, ಈಗ ದೇಶದ ಗಮನವನ್ನು ಮತ್ತೆ ತಮ್ಮತ್ತ ಸೆಳೆದುಕೊಂಡಿದ್ದಾರೆ.
ಖಾಸಗಿ ಸದಸ್ಯರ ಮಸೂದೆ ಮಂಡನೆ ನಿಯಮದಂತೆ ನಾನು ಮುಂದಿನ ವಾರ ಸಂಸತ್ತಿನಲ್ಲಿ ಅಣ್ಣಾ ಅವರ ಜನ ಲೋಕಪಾಲ ಮಸೂದೆಯನ್ನು ಮಂಡಿಸುತ್ತೇನೆ ಎಂದು ವರುಣ್ ಹೇಳಿದ್ದಾರೆ.
ಈ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನನ್ನ ವೈಯಕ್ತಿಕ ಇಚ್ಛೆ, ದೇಶಕ್ಕೆ ಅನುಕೂಲಕರವಾಗಿದ್ದಲ್ಲಿ ಪಕ್ಷ ಕೂಡಾ ಬೆಂಬಲಿಸುತ್ತದೆ ಎಂದು ವರುಣ್ ಹೇಳಿದ್ದಾರೆ. ಈ ಬಗ್ಗೆ ಅಣ್ಣಾ ಅವರಿಗೆ ಇನ್ನೂ ತಿಳಿಸಿಲ್ಲ.ಸಮಯ ಬಂದಾಗ ತಿಳಿಸುತ್ತೇನೆ.
'ಜನಕ್ಕೆ ಬೇಕಾದ್ದನ್ನು ಮಾಡುವುದೇ ರಾಜಕಾರಣಿಗಳ ಕರ್ತವ್ಯ ಆಗಲೇ ಅವರು ನಿಜವಾದ ಜನಪ್ರತಿನಿಧಿಗಳು, ಜನಸೇವಕರು ಎನಿಸುಕೊಳ್ಳಲು ಸಾಧ್ಯ' ಎಂಬ ಮಹಾತ್ಮಗಾಂಧಿಜೀ ಅವರ ನುಡಿಯನ್ನು ನಂಬಿದವನು ನಾನು. ಅಣ್ಣಾ ಅವರ್ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ವರುಣ್ ಹೇಳಿದರು.












Click it and Unblock the Notifications