ಆರೋಪ ಸಾಬಿತಾದ್ರೆ ಪಾಲಿಟಿಕ್ಸ್ ಗೆ ಗುಡ್ ಬೈ: ಎಚ್ಡಿಕೆ

ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ತನ್ನ ಅಧಿಕಾರಾವಧಿಯಲ್ಲಿ ಜಂತಕಲ್ ಗಣಿ ಕಂಪೆನಿ ಹಾಗೂ ವಿಶ್ವ ಭಾರತಿ ಹೌಸಿಂಗ್ ಸೊಸೈಟಿಗೆ ಕಾನೂನು ಉಲ್ಲಂಘನೆ ಮಾಡಿ ಅನುಮತಿ ನೀಡಿಲ್ಲ. ಕೆಲವು ತಾಂತ್ರಿಕ ತೊಂದರೆಗಳ ಹಿನ್ನೆಲೆಯಲ್ಲಿ ತಮಗೆ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡುರನ್ನು ತನಗೆ ಹೋಲಿಸದಿರುವಂತೆ ಮಾಧ್ಯಮಗಳಿಗೆ ಕುಮಾರಸ್ವಾಮಿ ಮನವಿ ಮಾಡಿದರು.
ನಾನು ಪಲಾಯನವಾದಿಯಲ್ಲ. ಕಾನೂನು ಹೋರಾಟ ನಡೆಸಿ, ಆರೋಪ ಮುಕ್ತನಾಗುತ್ತೇನೆ. ನ್ಯಾಯಾಲಯ ನೀಡಿರುವ ಸಮನ್ಸ್‌ನ್ನು ಗೌರವಯುತವಾಗಿ ಪಡೆದು ಉತ್ತರ ನೀಡುವೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗುತ್ತದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications