ಬಹುಕೋಟಿ ಹವಾಲಾ ಹಗರಣದಲ್ಲಿ ಯಡ್ಡಿ ಅಂಡ್ ಶೋಭಾ?

ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ Enforcement Directorate(ED) ಅಧಿಕಾರಿಗಳು ಯಡಿಯೂರಪ್ಪ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರ ಬ್ಯಾಂಕ್ ಖಾತೆ ಹಾಗೂ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿರಿಸಿದೆ.
ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಕೋಟ್ಯಂತರ ರೂಪಾಯಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಅವರ ಆಪ್ತೆಯಾಗಿರುವ ಸಚಿವೆ ಶೋಭಾ ಹಾಗೂ ಯಡಿಯೂರಪ್ಪ ದುಬೈ, ಹಾಂಕಾಂಗಿನ ವಿವಿಧ ಬ್ಯಾಂಕ್ ಗಳಲ್ಲಿ ಅಕ್ರಮ ಖಾತೆಗಳನ್ನು ಹೊಂದಿದ್ದಾರೆ.
ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಉದ್ಯಮಗಳಲ್ಲಿ ಹಣ ತೊಡಗಿಸಲಾಗಿದೆ. ಬೆಂಗಳೂರಿನ ಒಂದು ಬ್ಯಾಂಕ್ ಖಾತೆಯಿಂದ ವಿದೇಶದಲ್ಲಿರುವ ತನ್ನ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವ ದಾಖಲೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕೇಸಿನಲ್ಲಿ ಯಡ್ಡಿಯ ಪುತ್ರರಾದ ಬಿ ವೈ ರಾಘವೇಂದ್ರ ಮತ್ತು ಬಿವೈ ವಿಜಯೇಂದ್ರ ಶಾಮೀಲಾಗಿದ್ದಾರೆ. ಫೈವ್ ಸ್ಟಾರ್ ಹೋಟೆಲ್, ರೆಸಾರ್ಟ್ ಸೇರಿದಂತೆ ಅನೇಕ ಉದ್ಯಮಗಳನ್ನು ಯಡಿಯೂರಪ್ಪ ಅವರ ಪುತ್ರರು ನೋಡಿಕೊಳ್ಳುತ್ತಿದ್ದಾರೆ.
ಅಂತಾರಾಷ್ಟ್ರೀಯ ವಂಚಕ ಯಡ್ಡಿ? : ಈ ಕೇಸಿನಲ್ಲಿ ಇನ್ನೂ ಹೆಚ್ಚಿನ ದಾಖಲೆಗಳ ಕಲೆ ಹಾಕುತ್ತಿರುವ ಆದಾಯ ತೆರಿಗೆ ಇಲಾಖೆ, ಪ್ರಕರಣದ ಬಗ್ಗೆ ವಿವರ ನೀಡಲು ನಿರಾಕರಿಸಿದ್ದರೂ ಸಮಗ್ರ ಮಾಹಿತಿಗಳು ದೊರೆತರೆ ಯಡ್ಡಿ ಮತ್ತು ಅವರ ಬಳಗದ ವಿರುದ್ಧ ತೆರಿಗೆ ವಂಚನೆ ತಡೆ ಕಾಯ್ದೆ(Money Laundering Act ) ಮತ್ತು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(Foreign Exchange Maintenance Act) ಅನ್ವಯ ಕೇಸು ದಾಖಲಿಸಲು ಸಾಧ್ಯವಿದೆ ಎನ್ನಲಾಗಿದೆ.
ಯಡಿಯೂರಪ್ಪ ಮತ್ತು ಶೋಭಾ ಅವರು ಅಧಿಕಾರದಲ್ಲಿದ್ದಾಗ ದುಬೈ ಮತ್ತು ಹಾಂಕಾಂಗಿಗೆ ಪ್ರವಾಸ ಕೈಗೊಂಡು ಅಲ್ಲಿರುವ ತಮ್ಮ ಕಂಪನಿಗಳನ್ನುನಿರ್ವಹಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications