ಗಣಿಗಾರಿಕೆ ನಿಷೇಧದಿಂದ ರೈಲ್ವೆಗೆ 600 ಕೋಟಿ ರೂ ನಷ್ಟ

Mining Ban Rs 600 cr loss to Railway
ನವದೆಹಲಿ ಆ.17 ; ಸುಪ್ರೀಂ ಕೋರ್ಟು ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಿಷೇಧ ಮಾಡಿರುವುದರಿಂದ ರೈಲ್ವೇ ಇಲಾಖೆಗೆ 600 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ.

ರೈಲ್ವೆ ಇಲಾಖೆ ಈ ವರ್ಷ 115 ಮಿಲಿಯನ್ ಟನ್ ಗಳಷ್ಟು ಕಬ್ಬಿಣದ ಅದಿರನ್ನು ಸಾಗಿಸುವ ಗುರಿ ಹಾಕಿಕೊಂಡಿದ್ದು, ಹಿಂದಿನ ವರ್ಷ 3.43 ಮಿಲಿಯನ್ ಟನ್ ಅದಿರು ಸಾಗಾಟ ಮಾಡಿತ್ತು.

ಕಬ್ಬಿಣದ ಅದಿರು ಸಾಗಾಟದಿಂದ ಇಲಾಖೆಗೆ ವಾರ್ಷಿಕವಾಗಿ 9035.31 ಕೋಟಿ ರೂಪಾಯಿಗಳ ಆದಾಯ ಗಳಿಕೆಯಾಗಿದ್ದು ಇದು ಒಟ್ಟು ಸರಕು ಸಾಗಾಟದ ಶೇ.13 ರಷ್ಟು ಆದಾಯವಾಗಿದೆ.

ರೈಲ್ವೆ ಇಲಾಖೆ ಈ ವರ್ಷ ಸರಕು ಸಾಗಾಟದಿಂದ 86,620 ಕೋಟಿ ರೂಪಾಯಿಗಳ ಆದಾಯ ಗಳಿಸುವ ಗುರಿ ಹಾಕಿಕೊಂಡಿದೆ. 2009-10ರಲ್ಲಿ ಇಲಾಖೆ ಬಳ್ಳಾರಿಯಿಂದ 23 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಸಾಗಾಟ ಮಾಡಿದೆ.

2010-11 ರಲ್ಲಿ ಇದು 16 ಮಿಲಿಯನ್ ಟನ್ ಗಳಿಗೆ ಕುಸಿತವಾಗಿದೆ. ಕಳೆದ ಏಪ್ರಿಲ್ ನಿಂದ ಜೂನ್ ವರೆಗೆ 3.25 ಮಿಲಿಯನ್ ಟನ್ ಗಳಷ್ಟು ಕಬ್ಬಿಣದ ಅದಿರನ್ನು ಬಳ್ಳಾರಿಯಿಂದ ಸಾಗಾಟ ಮಾಡಲಾಗಿದೆ.

ಅದಿರು ಸಾಗಾಟದ ಬದಲಿಗೆ ಇತರ ಸರಕುಗಳ ಸಾಗಾಟ ಪ್ರಮಾಣವನ್ನು ಹೆಚ್ಚಿಸಲು ಇಲಾಖೆ ಯೋಜಿಸಿದೆ. ರಾಜ್ಯದಲ್ಲಿ ವಾರ್ಷಿಕ 42 ಮಿಲಿಯನ್ ಟನ್ ಗಳಷ್ಟು ಕಬ್ಬಿಣದ ಅದಿರು ಉತ್ಪಾದನೆ ಆಗುತಿದ್ದು ಇದರಲ್ಲಿ ಬಳ್ಳಾರಿಯ ಪಾಲು 35 ಮಿಲಿಯನ್ ಟನ್ ಗಳಾಗಿವೆ. ಗಣಿಗಾರಿಕೆ ನಿಷೇಧದಿಂದ ರೇಲ್ವೇ ಇಲಾಖೆಗೆ 2010 ರಲ್ಲಿ 1071 ಕೋಟಿ ರೂಪಾಯಿಗಳಷ್ಟು ಆದಾಯ ನಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+