ಮಂಗಳೂರು : ಕಾಂಗ್ರೆಸ್ ಮುಖಂಡ ಆತ್ಮಹತ್ಯೆಗೆ ಯತ್ನ

ಕಲ್ಲಡ್ಕದಲ್ಲಿರುವ ತಮ್ಮ ಮನೆಯಲ್ಲಿ ಈ ಕೃತ್ಯ ಮಾಡಿಕೊಂಡಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚಂದ್ರಹಾಸ ಶೆಟ್ಟಿ ಅವರನ್ನು ಅವರ ಸಹೋದರ ನೋಡಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
49 ವರ್ಷ ಪ್ರಾಯದ ಶೆಟ್ಟಿ ಅವರು ತಮ್ಮ ರಿವಾಲ್ವರ್ ನಿಂದಲೇ ಗುಂಡು ಹಾರಿಸಿಕೊಂಡಿರುವುದಕ್ಕೆ ಕಾರಣಗಳೇನೆಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಕೆಲವರ ಪ್ರಕಾರ, ಅವರು ಆರ್ಥಿಕ ಮುಗ್ಗಟು ಎದುರಿಸುತ್ತಿದ್ದರು ಎನ್ನಲಾಗುತ್ತಿದ್ದರೆ ಕೆಲವು ಮೂಲಗಳು ಅವರು ತೀವ್ರ ಸ್ವರೂಪದ ತಲೆಶೂಲೆಯಿಂದ ಬಳಲುತ್ತಿದ್ದರು ಎನ್ನುವ ಮಾಹಿತಿಯಿದೆ.
ಎರಡು ವರ್ಷಗಳ ಹಿಂದೆ ಅವರು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದರು, ಹುಟ್ಟೂರಲ್ಲೇ ಬೀಡಿ ಕಂಪನಿ ನಡೆಸುತ್ತಿದ್ದರು.












Click it and Unblock the Notifications