ಪಟ್ಟು ಬಿಡದ ಅಣ್ಣ; ಬಿಡುಗಡೆಗೆ ಒಪ್ಪದ ಸರಕಾರ

ಯಾವುದೇ ಷರತ್ತು ವಿಧಿಸದೆ ತಮಗೆ ಉಪವಾಸ ಸತ್ಯಾಗ್ರಹಕ್ಕೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ತಾವು ಜೈಲಿನಿಂದ ಹೊರಬರುವುದಿಲ್ಲ ಎಂದು ಅಣ್ಣಾ ಪಟ್ಟು ಹಿಡಿದಿದ್ದಾರೆ ಎಂದು ಜೈಲಿನಲ್ಲಿ ಅಣ್ಣಾ ಜತೆ ಸಂಧಾನಕ್ಕೆ ಯತ್ನಿಸಿದ್ದ ಆರ್ಟ್ ಆಫ್ ಲಿವಿಂಗ್ ಕೇಂದ್ರದ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ. ಇದಕ್ಕೂ ಮುನ್ನ ಅಣ್ಣಾ ಬಿಕ್ಕಟ್ಟು ಯತ್ನಕ್ಕೆ ಸೂತ್ರವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಸಭೆಗೆ ತಿಳಿಸಿದ್ದರು.
ಇದೇ ವೇಳೆ ಅಣ್ಣಾರ ಕೆಲವು ಬೇಡಿಕೆಗಳನ್ನು ದೆಹಲಿ ಪೊಲೀಸರು ಒಪ್ಪಿಕೊಂಡಿದ್ದಾರೆ. ರಾಮಲೀಲಾ ಮೈದಾನದಲ್ಲಿ 7 ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಸರಕಾರ ಸಮ್ಮತಿ ಸೂಚಿಸಿದೆ. ಆದರೆ ಕೆಲವು ಷರತ್ತುಗಳನ್ನೂ ವಿಧಿಸಿದೆ. ಇದು ಅಣ್ಣಾಗೆ ಸಮ್ಮತವಾಗಿಲ್ಲ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಜೈಲಿನೆದುರು ಬೆಳಗ್ಗೆಯಿಂದಲೇ ಅಸಂಖ್ಯಾತ ಬೆಂಬಲಿಗರು ಜಮಾಯಿಸಿದ್ದು, 'ಅಣ್ಣಾ ಅಮರ್ ರಹೆ; ಭ್ರಷ್ಟಾಚಾರ್ ಮುರ್ದಾಬಾದ್' ಎಂದು ಘೋಷಣೆ ಹಾಕಿದ್ದಾರೆ. ಮೇಧಾ ಪಾಟ್ಕರ್, ಶಾಂತಿಭೂಷಣ್, ಬಾಬಾ ರಾಮದೇವ್ ಅಣ್ಣಾ ಜತೆ ಸಂಪರ್ಕದಲ್ಲಿದ್ದಾರೆ.












Click it and Unblock the Notifications