ಅಣ್ಣಾ ಹಜಾರೆ ಬಂಧನ ಸಮರ್ಥಿಸಿಕೊಂಡ ಪ್ರಧಾನಿ ಸಿಂಗ್

anna-arrest-pm-singh-justifies-police-action
ನವದೆಹಲಿ, ಆಗಸ್ಟ್ 17: ಗಾಂಧಿವಾದಿ ಅಣ್ಣಾ ಹಜಾರೆ ಅವರ ಬಂಧನವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಲೋಕಸಭೆಯಲ್ಲಿ ಬುಧವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಇದನ್ನು ಪ್ರತಿಭಟಿಸಿ ಎಲ್ಲ ಪ್ರತಿಪಕ್ಷಗಳು ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಭ್ರಷ್ಟಾಚಾರ ವಿರೋಧಿ ಆಂದೋಲನಕಾರರನ್ನು ಪೊಲೀಸರು ಅನಿವಾರ್ಯವಾಗಿ ಬಂಧಿಸಿದರು ಎಂಬುದನ್ನು ಸಂಸತ್ತಿಗೆ ತಿಳಿಸಲು ನನಗೆ ನೋವುಂಟಾಗುತ್ತಿದೆ. ಆದರೆ ಅಣ್ಣಾ ಮತ್ತು ಅವರ ಬೆಂಬಲಿಗರು ಪೊಲೀಸರ ಷರತ್ತುಗಳಿಗೆ ಒಪ್ಪಿಗೆ ಸೂಚಿಸಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಬಂಧಿಸಬೇಕಾಯಿತು ಎಂದು ಸಿಂಗ್ ಮ್ಲಾನವದನರಾಗಿ ಸಂಸದರನ್ನುದ್ದೇಶಿ ಹೇಳಿದರು.

ರಾಜ್ಯಸಭೆಯಲ್ಲೂ ಪ್ರಧಾನಿ ಸಿಂಗ್ ಅಣ್ಣಾ ಬಂಧನವನ್ನು ಸಮರ್ಥಿಸಿಕೊಡಿದ್ದಾರೆ. 'ಅಣ್ಣಾ ಉದ್ದೇಶ ಉದಾತ್ತವಾಗಿಯೇ ಇದೆ. ಆದರೆ ಅವರು ಅನುಸರಿಸುತ್ತಿರುವ ಮಾರ್ಗ ಸರಿಯಿಲ್ಲ' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಅಣ್ಣಾ ಇನ್ನೂ ತಿಹಾರ್ ಜೈಲಿನಲ್ಲೇ: ಈ ಮಧ್ಯೆ, ಅಣ್ಣಾ ಹಜಾರೆ ಅವರು ಪೊಲೀಸರ ಯಾವುದೇ ಷರತ್ತಿಗೆ ಮಣಿಯದೆ ತಿಹಾರ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನೂ ಮುಂದುವರಿಸಿದ್ದಾರೆ. ಇನ್ನು, ಅಣ್ಣಾಗೆ ಅಖಂಡ ಬೆಂಬಲ ವ್ಯಕ್ತಪಡಿಸಿ ಸಾವಿರಾರು ಮಂದಿ ತಿಹಾರ್ ಜೈಲಿನ ಎದುರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಅಣ್ಣಾ ತಮ್ಮ ಬಿಡುಗಡೆಯ ನಂತರ ಸೀದಾ ಜಯಪ್ರಕಾಶ್ ನಾರಾಯಣ್ ಪಾರ್ಕಿಗೆ ತೆರಳಿ, ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಕ್ಕೆ ಅನುಮತಿ ನೀಡಿದರೆ ಮಾತ್ರವೇ ತಾವು ಜೈಲಿನಿಂದ ಹೊರಬೀಳುವುದಸಾಗಿ ಅಣ್ಣಾ ಜೈಲು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+