ಅಣ್ಣಾರನ್ನು ಬಂಧಿಸಿದ್ದೇಕೆ: ಮಾನವ ಹಕ್ಕು ಆಯೋಗ ಗರಂ

anna-arrest-nhrc-notice-home-ministry
ನವದೆಹಲಿ, ಆಗಸ್ಟ್ 17: ಗಾಂಧಿವಾದಿ ಅಣ್ಣಾ ಹಜಾರೆ ಅವರನ್ನು ಬಂಧಿಸಿದ್ದೇಕೆ ಎಂದು ಪ್ರಶ್ನಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಗೃಹ ಸಚಿವ ಹಾಗೂ ದಿಲ್ಲಿ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ.

ಹಜಾರೆ ಬಂಧನವನ್ನು ಪ್ರಶ್ನಿಸಿ ಮಾನವ ಹಕ್ಕುಗಳ ಕಾರ್ಯಕರ್ತ ಅನಿರುದ್ಧ ಚಕ್ರವರ್ತಿ ನೀಡಿದ ದೂರನ್ನು ಸ್ವೀಕರಿಸಿದ ಆಯೋಗವು ನೋಟಿಸ್ ಜಾರಿಗೊಳಿಸಿದೆ. ಹಜಾರೆ ಹಾಗೂ ಅವರ ಬೆಂಬಲಿಗರ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯು ಸಂವಿಧಾನದ ನಿಯಮಾವಳಿಗಳು ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಡಂಬಡಿಕೆಯನ್ನು ಉಲ್ಲಂಘಿಸಿದೆ ಎಂದು ಚಕ್ರವರ್ತಿ ತಮ್ಮ ಅರ್ಜಿಯಲ್ಲಿ ದೂರಿದ್ದರು.

'ಪ್ರತಿಬಂಧಕ ಕ್ರಮವಾಗಿ ಹಜಾರೆಯವರನ್ನು ಬಂಧಿಸಿರುವ ಬಗ್ಗೆ ಆಯೋಗವು ದೂರೊಂದನ್ನು ಸ್ವೀಕರಿಸಿದೆ. ಹಜಾರೆ ಮತ್ತವರ ಬೆಂಬಲಿಗರು ಶಾಂತಿಯುತ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿದ್ದರೂ, ಅವರ ವಿರುದ್ಧ ದೂರನ್ನು ದಾಖಲಿಸಲಾಗಿದೆ' ಎಂದು ಎನ್‌ಎಚ್‌ಆರ್ ಸಿ ವಕ್ತಾರರು ತಿಳಿಸಿದ್ದಾರೆ.

ಹಜಾರೆ ಮತ್ತಿತರರ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಎರಡು ವಾರಗಳೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಆರ್ಕೆ ಸಿಂಗ್ ಹಾಗೂ ದಿಲ್ಲಿ ಪೊಲೀಸ್ ಆಯುಕ್ತ ಬಿಕೆ ಗುಪ್ತಾಗೆ ಎನ್‌ಎಚ್‌ಆರ್ ಸಿ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+