ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪೇದೆಗೆ ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಏಕೆ ಬಂತು ಗೊತ್ತಾ?

By Srinath
|
Google Oneindia Kannada News

udupi-constable-sridhar-president-gallentary-award
ಉಡುಪಿ, ಆಗಸ್ಟ್ 16: ಬೈಂದೂರು ಠಾಣೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದ ದಿವಂಗತ ಶ್ರೀಧರ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿಯವರ ಶೌರ್ಯ ಪ್ರಶಸ್ತಿ ದೊರಕಿದೆ.

ಇವರು ನಕ್ಸಲ್ ವಿರೋಧಿ ಕಾರ್ಯಾಚರಣೆ ಪಡೆಯಲ್ಲೂ (ಎಎನ್ಎಫ್) ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಕುಂದಾಪುರದ ಸಂಗಮ್‌ ಬಳಿ ಸರಣಿ ದರೋಡೆಕೋರರನ್ನು ಹಿಡಿಯುವ ಸಂದರ್ಭದಲ್ಲಿ ಶ್ರೀಧರ್ ಸಾವಿಗೀಡಾಗಿದ್ದರು.

ಕಾರ್ಯಾಚರಣೆ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಮೇಲೆ ದರೋಡೆಕೋರರು ಹಲ್ಲೆ ನಡೆಸಲು ಮುಂದಾದರು. ಅದನ್ನು ತಪ್ಪಿಸಲು ಪೇದೆ ಶ್ರೀಧರ್ ಪ್ರಯತ್ನಿಸಿದ್ದರು. ಆಗ ದರೋಡೆಕೋರರು ಹಿಂದಿನಿಂದ ಅವರಿಗೆ ಚೂರಿ ಹಾಕಿದ್ದರು. ಶ್ರೀಧರ್ ಗೆ ಕಳೆದ ವರ್ಷ ಮುಖ್ಯಮಂತ್ರಿಗಳ ಪದಕ ದೊರಕಿತ್ತು. ಈ ಬಾರಿ ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಬಂದಿದೆ.

ಮೈಯಾಡಿ ನಿವಾಸಿಯಾಗಿದ್ದ ಶ್ರೀಧರ್ ಅವರು ಬಡ ಕುಟುಂಬದಿಂದ ಬಂದವರು. ಶ್ರೀಧರ್ ಅವರು ಪೊಲೀಸ್‌ ಇಲಾಖೆಯಲ್ಲಿ ಸುಮಾರು ಒಂದು ದಶಕ ಸೇವೆ ಸಲ್ಲಿಸಿದ್ದರು. ಶ್ರೀಧರ್ ಹಿಂದೆ ಕುಂದಾಪುರ ಮಹಿಳಾ ಠಾಣೆಯಲ್ಲಿ, ಅನಂತರ ಬೈಂದೂರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಇವರಿಗೆ ಒಬ್ಬ ಪುತ್ರಿಯಿದ್ದು, ಪತ್ನಿಯೂ ಪೊಲೀಸ್‌ ಆಗಿದ್ದಾರೆ.

English summary
President gallantry award - Udupi constable Sridhar gets posthumously for this year 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X