ಭದ್ರಾ ಅಕ್ರಮ ಗಳಿಕೆ: 3 ವರಿಷ್ಠರ ಜತೆ ಯಡಿಯೂರಪ್ಪ ಹಂಚಿಕೆ
ಮೈಸೂರು,
ಆಗಸ್ಟ್ 16: 'ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬ ವರ್ಗದಿಂದ ಬಿಜೆಪಿಯ ಮೂವರು ವರಿಷ್ಠರಿಗೆ ಚೆಕ್ ಮೂಲಕ ಹಣ ಸಂದಾಯವಾಗಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. id="toptextpromo">'2004-05ರಲ್ಲಿ
ಕಾಮಗಾರಿ ಆರಂಭವಾದಾಗ 500 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿತ್ತು. ಪ್ರಸ್ತುತ ಕಾಮಗಾರಿ ವೆಚ್ಚವನ್ನು 1020 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ 14 ಕೋಟಿ ರೂಪಾಯಿಗಳಷ್ಟು ಲಂಚ ಪಡೆದಿರುವ ಯಡಿಯೂರಪ್ಪ ಕೇಂದ್ರದ ಮೂವರು ಪ್ರಭಾವಿ ವರಿಷ್ಠರಿಗೂ ಹಣ ನೀಡಿದ್ದಾರೆ' ಎಂದಿದ್ದಾರೆ ಎಚ್ ಡಿ ಕೆ. id='are-slot-1' class='oiad oi-axt oiadv'> id='top-searched-articles'>'ಲೋಕಾಯುಕ್ತ
ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಈ ಕುರಿತು ಆಳವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಾನೇ ಆ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.











Click it and Unblock the Notifications