ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧನ ಅನುಚಿತ, ಸುಪ್ರೀಂ ಕೋರ್ಟಿಗೆ ಮೊರೆ: ಅಣ್ಣಾ

By Srinath
|
Google Oneindia Kannada News

anna-hazare-questions-police-continues-fast
ನವದೆಹಲಿ, ಆಗಸ್ಟ್ 16: ತಮ್ಮ ಬಂಧನ ಅನುಚಿತವಾಗಿದ್ದು ಕೊನೆಯು ಉಸಿರಿರುವವರೆಗೂ ಹೋರಾಟ ಮಾಡುವುದಾಗಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕಿಶನ್ ಬಾಪಟ್ ಬಾಬುರಾವ್ ಅಣ್ಣಾ ಹಜಾರೆ ಘೋಷಿಸಿದ್ದಾರೆ.

ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿಯೂ ಅವರು ಹೇಳಿದ್ದಾರೆ. ಬಂಧಿಸಿ ತಮ್ಮನ್ನು ಬಂಧಿಸಿದ್ದೇಕೆ ಎಂಬ ಕಾರಣವನ್ನಾದರೂ ತಿಳಿಸಿ ಎಂದು ಅಣ್ಣಾ ಪೊಲೀಸರಿಗೆ ಕೇಳಿದ್ದಾರೆ. ತಮ್ಮ ಬಂಧನ ಮತ್ತು ಉಪವಾಸ ಸತ್ಯಾಗ್ರಹಕ್ಕೆ ಭಂಗ ತಂದ ಪೊಲೀಸರ ಕ್ರಮವನ್ನು ಪ್ರಶ್ನಿಸಿ, ತಕ್ಷಣವೇ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಅಣ್ಣಾ ಹೇಳಿದ್ದಾರೆ.

ಅಣ್ಣಾ ಸ್ವಾತಂತ್ರ್ಯ ಹರಣವನ್ನು ವಿರೋಧಿಸಿ ಪ್ರತಿಪಕ್ಷವಾದ ಬಿಜೆಪಿ ಇಂದು ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸುವ ಸಾಧ್ಯತೆ ಇದೆ. ಅಣ್ಣಾ ಹಜಾರೆ ಬಂಧನವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ನ್ಯಾಯವಾದಿ ಶಾಂತಿಭೂಷಣ್ ಹೇಳಿದ್ದಾರೆ.

ಅಣ್ಣಾ ಬಂಧನ ದುರದೃಷ್ಟಕರ ಎಂದು ಲೋಕಪಾಲ ಮಸೂದೆ ನಾಗರಿಕ ಸಮಿತಿ ಸದಸ್ಯ ನ್ಯಾ. ಸಂತೋಷ ಹೆಗ್ಡೆ ಅವರು ಪ್ರತಿಕ್ರಿಯಿಸಿದ್ದು, ಸರಕಾರ ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಂಡಿದೆ ಎಂದಿದ್ದಾರೆ.

ಈ ಮಧ್ಯೆ, ಅಣ್ಣಾ ಉಪವಾಸ ಕೈಗೊಳ್ಳಲಿದ್ದ ಜೆಪಿ ಪಾರ್ಕನ್ನು ಪೊಲೀಸರು ಸುತ್ತುವರಿದಿದ್ದಾರೆ. ಅಲ್ಲಿದ್ದ ಹೋರಾಟಗಾರರನ್ನು ಪೊಲೀಸರು ಚೆದುರಿಸಿದ್ದು, ಅನೇಕ ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಜೆಪಿ ಪಾರ್ಕ್ ಸುತ್ತಮುತ್ತ ಪೊಲೀಸರು ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.

English summary
Anna Hazare who was detained by the Delhi Police at his residence ahead of his proposed fast against corruption a short while ago has questioned his arrest. He declared he will continue fast in jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X