ಕೇಂದ್ರ ಸರ್ಕಾರದಿಂದ ಅಣ್ಣಾ ಹಜಾರೆಗೇ ಭ್ರಷ್ಟ ಪಟ್ಟ

"ಶುದ್ಧ ಆಚಾರ, ವಿಚಾರ ಹೊಂದಿದ ವ್ಯಕ್ತಿ" ಎಂದೇ ಖ್ಯಾತರಾಗಿರುವ ಅಣ್ಣಾ ವಿರುದ್ಧ ಕಾಂಗ್ರೆಸ್ ವೈಯಕ್ತಿಕ ದಾಳಿಗಿಳಿದಿದೆ. ಅಣ್ಣಾ ಅವರಿಗೆ ಸೇರಿದ ಟ್ರಸ್ಟ್ ವಿರುದ್ಧ ನ್ಯಾ. ಪಿ.ಬಿ. ಸಾವಂತ್ ಸಮಿತಿಯ ವರದಿಯಲ್ಲಿ ಮಾಡಲಾದ ಕೆಲ ಭ್ರಷ್ಟಾಚಾರ ಆರೋಪಗಳನ್ನು ಈಗ ಕೆದಕುವ ಮೂಲಕ ಬಾಬಾ ರಾಮ್ ದೇವ್ ಮೇಲೆ ಪ್ರಯೋಗಿಸಿದ್ದ ಅಸ್ತ್ರವನ್ನೇ ಕಾಂಗ್ರೆಸ್ ಪ್ರಯೋಗಿಸಿರುವುದು ಗೋಚರಿಸುತ್ತಿದೆ.
ಅಣ್ಣಾ ವಿರುದ್ಧ ಕಾಂಗ್ರೆಸ್ ಆರೋಪಗಳು:
* 2003ರಲ್ಲಿ ಪಿ.ಬಿ.ಸಾವಂತ್ ಆಯೋಗವು ಮಹಾರಾಷ್ಟ್ರದ ರಾಳೇಗಣ ಸಿದ್ಧಿಯಲ್ಲಿರುವ ಅಣ್ಣಾ ಹಜಾರೆಯವರ "ಹಿಂದ್ ಸ್ವರಾಜ್ ಟ್ರಸ್ಟ್ ಸೇರಿದಂತೆ 4 ಟ್ರಸ್ಟ್ ಗಳ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಟ್ರಸ್ಟ್ ಗಳಲ್ಲಿಯ ಹಣದ ಅಪವ್ಯಯ, ವ್ಯತ್ಯಾಸಗಳ ಬಗ್ಗೆ ಅಣ್ಣಾ ಹಜಾರೆಯ ಮೇಲೂ ಆರೋಪವಿದ್ದರೂ ಅದಕ್ಕೆ ಅಣ್ಣಾ ಯಾವುದೇ ಉತ್ತರ ನೀಡಿಲ್ಲ.
* ಅಣ್ಣಾ ಹಜಾರೆ ಹುಟ್ಟುಹಬ್ಬ ಆಚರಣೆಗೆ ಟ್ರಸ್ಟಿನ 2.2 ಲಕ್ಷ ರು. ದುರ್ಬಳಕೆಯಾಗಿದೆ.
* ಅವರ ಯಾದವ ಬಾಬಾ ಶಿಕ್ಷಣ ಮಂಡಳಿ ಕಳೆದ 20 ವರ್ಷಗಳಿಂದ ಲೆಕ್ಕಪತ್ರ ಸಲ್ಲಿಸಿಲ್ಲ.
* ಅಣ್ಣಾ ಹಜಾರೆ ನೇತೃತ್ವ ಭ್ರಸ್ಟಾಚಾರ ವಿರೋಧಿ ಜನಾದೋಲನ ಸಂಸ್ಥಾನ ಸಂಸ್ಥೆ ಜನರನ್ನು ಬೆದರಿಸುವುದು, ಹಿಂಸಿಸುವುದು ಮುಂತಾದ ಕಾಯಕದಲ್ಲಿ ತೊಡಗಿದೆ.
* ಅಣ್ಣಾ ಸೇವೆಯಲ್ಲಿದ್ದಾಗ ವಿವರ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿರುವ ಅರ್ಜಿಗೆ ಈವರೆಗೂ ಅವರು ವಿವರ ನೀಡಿಲ್ಲ; ಆಯೋಗದ ನಿಯಮ ಪಾಲಿಸಿಲ್ಲ
ಕಾಂಗ್ರೆಸ್ ಈ ಎಲ್ಲಾ ಆಪಾದನೆಗಳು ಸುಳ್ಳು ಎಂದಿರುವ ಅಣ್ಣಾ ಹಜಾರೆ, "ಸಾವಂತ್ ವರದಿಯಲ್ಲಿ ನನ್ನ ಹೆಸರೇ ಇಲ್ಲ. ನನ್ನ ಟ್ರಸ್ಟ್ ಆಸ್ತಿಯನ್ನು 24 ಗಂಟೆಯೊಳಗೆ ಬಹಿರಂಗ ಮಾಡುವೆ. ನಾನು ನಿರ್ದೋಷಿ ಎಂದು ಸಾಬೀತಾಗುವವರೆಗೂ ಉಪವಾಸ ಮಾಡುವೆ" ಎಂದು ಅಣ್ಣಾ ಅದಕ್ಕೆ ಪ್ರತಿಕ್ರಯಿಸಿದ್ದಾರೆ.
ಈ ಅಣ್ಣಾ ಹಜಾರೆ-ಕೇಂದ್ರ ಸರ್ಕಾರದ ವೈಮನಸ್ಯ ಈಗ ಹೋರಾಟದ ಹಾದಿಯಲ್ಲಿ ಹೊಸ ತಿರುವು ಪಡೆಯಲಿದ್ದು ಈ ವಿಷಯವೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.












Click it and Unblock the Notifications