ಕೊಪ್ಪಳದಲ್ಲಿ ಅಕ್ಷರ ಕ್ರಾಂತಿ ಹರಿಕಾರ ಟೆಕ್ಕಿ ರಾಜೇಶ್ ಭಟ್

"ಜಾತಿ, ಮತ, ಪಂಥ, ಆರ್ಥಿಕ ಹಿನ್ನೆಲೆ ಯಾವುದನ್ನು ಪರಿಗಣಿಸದೆ ಪ್ರತಿ ಗ್ರಾಮಸ್ಥರನ್ನು ಅಕ್ಷರಸ್ಥರನ್ನಾಗಿಸಿ, ವ್ಯವಹಾರ ಕೌಶಲ್ಯ ಕಲಿಸುವುದು ಹಾಗೂ ಉತ್ತಮ ವೃತ್ತಿ ಆವಕಾಶ ಕಲ್ಪಿಸಿ ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಮಾಡುವುದು" ನಮ್ಮ ಸಂಸ್ಥೆ ಉದ್ದೇಶ ಎಂದು ರಾಜೇಶ್ ಹೇಳುತ್ತಾರೆ.
ಟೆಕ್ಕಿ ಆದ ಹೊಸ ಹರಿಕಾರ: ಕೊಪ್ಪಳದ ಮಣ್ಣು ಕಾಲಿಗೆ ಮೆತ್ತಿಕೊಳ್ಳುವ ಮುನ್ನ ರಾಜೇಶ್ ಓಡಾಡುತ್ತಿದ್ದದ್ದು ಕಾರ್ಪೆಟ್ ಹಾಸಿನ ಮೇಲೆ ಎಂಬುದು ವಿಶೇಷ. 2007ರಲ್ಲಿ ಆನ್ ಮೊಬೈಲ್ ಎಂಬ ಬೆಂಗಳೂರು ಮೂಲದ ಸಂಸ್ಥೆಯಲ್ಲಿ ಸಾಫ್ಟ್ ವೇರ್ ತಂತ್ರಜ್ಞನಾಗಿ ರಾಜೇಶ್ ದುಡಿಯುತ್ತಿದ್ದರು. ಸಮಾನ ಮನಸ್ಕ ಗೆಳೆಯ, ಗುರು ಎಸ್ ಸುನಿಲ್ ಅವರ ಮೂಲಕ ಬದುಕು ಹೊಸ ದಿಕ್ಕಿಗೆ ತಿರುಗಿತು.
ಈ ಇಬ್ಬರು ಹೊಸ ಹಾದಿ ಹರಿಕಾರರು ಮೊದಲಿಗೆ 8 ಜನರ ತಂಡ ಕಟ್ಟಿದರು. 18 ರಿಂದ 22 ವಯೋಮಿತಿಯ ಗ್ರಾಮಸ್ಥರನ್ನು ಹುಡುಕಿ ತಂಡಕ್ಕೆ ಸೇರಿಸಿದರು. ಹೀಗೆ ಹೊಸ ಕಂಪನಿಗೆ ಸೇರಿದ ಗ್ರಾಮದ ಯುವಕರಿಗೆ ಅಕ್ಷರದ ಗಂಧ ಗಾಳಿಯೇ ಇರಲಿಲ್ಲ. ಇನ್ನು ಬಿಪಿಒದಲ್ಲಿ ಕೆಲಸ ನಿರ್ವಹಣೆ ಹೇಗೆ ಸಾಧ್ಯ ಎಂದು ಅನೇಕರು ಮೂಗು ಮುರಿದಿದ್ದರು.
ಆದರೆ, ಕೇವಲ ಎಂಟು ತಿಂಗಳಿನಲ್ಲೇ ಅಕ್ಷರದ ಬೀಜ ಮೊಳಕೆಯೊಡೆದು ಫಲ ನೀಡತೊಡಗಿತ್ತು. ಎಂಟು ಜನರನ್ನು ಕಟ್ಟಿಕೊಂಡು ಕೊಪ್ಪಳದಲ್ಲಿ ಆರಂಭಿಸಲಾದ ಕೇಂದ್ರದ ಮೂಲಕ ಯುವಕರಿಗೆ ಇಂಗ್ಲೀಷಿನ ಓನಾಮ ಆರಂಭವಾಯಿತು. ಪಾಠ ಪ್ರವಚನಕ್ಕಿಂತ ಹೆಚ್ಚಾಗಿ ನಲಿ ಕಲಿ ಮಾದರಿಯಲ್ಲಿ ಗಣಿತ, ಲಾಜಿಕ್ , ಜೀವನಕ್ಕೆ ಬೇಕಾದ ಮೌಲ್ಯಗಳು, ವ್ಯವಹಾರ ಜ್ಞಾನ, ಭಾಷೆ ಬಳಕೆ ಬಗ್ಗೆ ತಿಳಿ ಹೇಳಲಾಗುತ್ತಿತ್ತು.
![]() | |
| Where the mind is without fear, and the head is held high, into that country of freedom, may these dreams come to life | |
![]() | |
ಆತ್ಮವಿಶ್ವಾಸವೇ ಜಯದ ಮೊದಲ ಗುಟ್ಟು: ಆದರೆ, ಮೊದಲಿಗೆ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದೆವು. ಯಂಕಮ್ಮ ಇಂದು ಕೊಪ್ಪಳಕ್ಕೆ ಬಂದು ಹಣ್ಣು ವ್ಯಾಪಾರ ಮಾಡುತ್ತಿದ್ದಾಳೆ, ಅಡುಗೆಗಾರರ ಕೆಲಸಕ್ಕೆ ಅರ್ಜಿ ಹಾಕಿದ್ದಾಳೆ. ತನ್ನ ಮಗನಿಗೆ ತಾನೇ ಇಂಗ್ಲೀಷ್ ಪಾಠ ಮಾಡುತ್ತಾಳೆ. ಕುರಿ ಕಾಯುತ್ತಾ ಕಾಲ ಕಳೆಯುತ್ತಿದ್ದ ರಮೇಶ, ದನ ಕರು, ಕುರಿ ಮೇಯಿಸುಕೊಂಡೇ ಅಕ್ಷರವನ್ನು ಕಲಿತ. ಈಗ ನಮ್ಮ ಕಂಪನಿಯ ಉದ್ಯೋಗಿಯಾಗಿದ್ದು, ಬ್ಯಾಂಕಿನಲ್ಲಿ ವ್ಯವಹರಿಸುವಷ್ಟು ಕಲಿತ್ತಿದ್ದಾನೆ.
ಹೆಡ್ ಹೆಲ್ಡ್ ಹೈ ನಲ್ಲಿ 113 ಜನರಿಗೆ ಸಂಪೂರ್ಣ ತರಬೇತಿ ಸಿಕ್ಕಿದೆ. ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಬಿಪಿಒನಲ್ಲಿ ಕೆಲಸ ನೀಡಲಾಗುತ್ತಿದೆ. 2011ರಲ್ಲಿ 500 ಜನರಿಗೆ ತರಬೇತಿ ನೀಡುವ ಉದ್ದೇಶವಿದೆ. ಭಾರತದ 100 ಹಿಂದುಳಿದ ಜಿಲ್ಲೆಗಳಿಗೂ ನಮ್ಮ ಕಾರ್ಯವನ್ನು ವಿಸ್ತರಿಸುವ ಯೋಜನೆಯಿದೆ ಎಂದು ರಾಜೇಶ್ ಹೇಳುತ್ತಾರೆ.
ರಾಜೇಶ್ ಹಾಗೂ ಸಂಗಡಿಗರ ಸಾಹಸ ನೋಡಿದರೆ ವಿಶ್ವಕವಿ ಠಾಗೋರರು ಹೇಳಿದ 'Where the mind is without fear, and the head is held high, into that country of freedom, may these dreams come to life' ಕವಿವಾಣಿ ನೆನಪಾಗುತ್ತದೆ.
ಕಡು ಬಡವರಿಗೆ ಉದಾರೀಕರಣದ ನಿಜ ಅನುಭವ ಉಣಿಸಿ, ಬರಡು ನೆಲದಲ್ಲಿ ಬಿಪಿಒ ಸ್ಥಾಪಿಸಿ ಭರ್ಜರಿ ಬೆಳೆ ತೆಗೆಯುತ್ತಿರುವ ಟೆಕ್ಕಿ ರಾಜೇಶ್ ಭಟ್ ಬಗ್ಗೆ ಇತ್ತೀಚೆಗೆ ಸಿಎನ್ ಎನ್ ಸುದ್ದಿ ವಾಹಿನಿಗಳು ವಿಶೇಷ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡಿದೆ.














Click it and Unblock the Notifications