ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ನಿರ್ದೇಶಕನ ಜೇಬಲ್ಲಿತ್ತು 150 ಯುವತಿಯರ ಚಿತ್ರ

By Mahesh
|
Google Oneindia Kannada News

Fake director held, sulia
ಸುಳ್ಯ ಆ.13: ಆತ ತನ್ನನ್ನು ತಾನು ಸಿನಿಮಾ ನಿರ್ದೇಶಕ ಎಂದು ಎಲ್ಲೆಡೆ ಗುರುತಿಸಿಕೊಳ್ಳುತ್ತಿದ್ದ, ಗಾಂಧಿನಗರಕ್ಕೆ ಅವಕಾಶ ಹುಡುಕಿಕೊಂಡು ಬರುವ ಅಮಾಯಕ ಯುವ ನಟಿಯರನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಅವನಿಗೆ ಚಟವಾಗಿತ್ತು.

ಕುಕ್ಕೆ ಸುಬ್ರಮಣ್ಯಕ್ಕೆ ಬಂದ ನಿರ್ದೇಶಕ ಖಾಸಗಿ ಲಾಡ್ಜ್ ನಲ್ಲಿ ರೂಮ್ ಮಾಡಿದ್ದಾನೆ, ಆತನ ಜೊತೆಗೆ ಒಬ್ಬ ಯುವತಿ ಕೂಡಾ ಇದ್ದಳು. ಆದರೆ, ಈತನ ನಡೆ ನುಡಿ ನೋಡಿದರೆ ಇದು ಅಂತದ್ದೇ ಕೇಸ್ ಎಂದು ಸಂಶಯಿಸಿದ ಸ್ಥಳೀಯರು ಹಿಂದೂ ಜಾಗರಣ ವೇದಿಕೆಗೆ ಸುಳಿವು ನೀಡಿದ್ದಾರೆ.

ನಿರ್ದೇಶಕನ ಚಲನವಲನಗಳನ್ನು ಗಮನಿಸಲು ಸ್ಥಳೀಯ ಕಲಾವಿದ ಯತೀಶ್ ಎಂಬುವನಿಗೆ ಕೆಲಸ ವಹಿಸಿದ್ದಾರೆ. ಲಾಡ್ಜ್ ಹತ್ತಿರ ಹೊಂಚು ಹಾಕಿಕೊಂಡು ಕಾದಿದ್ದ ಯತೀಶ್ ಆ ನಿರ್ದೇಶಕನನ್ನು ನೋಡಿದ ತಕ್ಷಣವೇ ಗುರುತಿಸಿದ್ದಾನೆ.

ಓವರ್ ಟು ಪೊಲೀಸ್ ಸ್ಟೇಷನ್: ನಿರ್ದೇಶಕನ ಸೋಗಿನಲ್ಲಿ ಮಜಾ ಉಡಾಯಿಸುತ್ತಿದ್ದವನ ಹೆಸರು ಲತೀಫ್, ಇಲ್ಲೆ ಹತ್ತಿರದ ನೆಲ್ಯಾಡಿಯವನು, ಶೂಟಿಂಗ್ ಯೂನಿಟ್ ಗೆ ಫುಡ್ ಸಪ್ಲೈ ಮಾಡುತ್ತಿದ್ದ.

ಆತನನ್ನು ವಿಚಾರಿಸಿದ ಮೇಲೆ ಪೂರ್ವ ವಿವರವನ್ನು ಬಾಯಿ ಬಿಟ್ಟಿದ್ದಾನೆ. ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಪೇಪರ್ ಮಾರುತ್ತಿದ್ದನಂತೆ ಆಮೇಲೆ ಕೆಲಕಾಲ ಆಟೋರಿಕ್ಷಾ ಓಡಿಸಿದ್ದಾನೆ. ಆತನ ಜೀವನ ಚಕ್ರ ಓಡದಿದ್ದಾಗ, ಅವರಿವರ ಸಹಾಯ ಬೇಡಿ ಗಾಂಧಿನಗರದ ಗೀಳು ಅಂಟಿಸಿಕೊಂಡಿದ್ದಾನೆ.

ಆತನ ಬಳಿ ಏನಿಲ್ಲ ಅಂದರೂ 150ಕ್ಕೂ ಹೆಚ್ಚು ಹುಡುಗಿಯರ ಫೋಟೋಗಳು ಇದ್ದವು. ಕೇಸು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಠಾಣಾಧಿಕಾರಿ ಹೇಳಿದರು. ಈತನ ಜೊತೆ ಬಂದಿದ್ದ ಯುವತಿಯರನ್ನು ವಿಚಾರಿಸಿ, ಬುದ್ಧಿವಾದ ಹೇಳಿ ಕಳಿಸಲಾಗಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಈ ರೀತಿ ಕಾಮಕೇಳಿ ಅಡ್ಡಾಗಳಾಗಿ ಮಾಡುತ್ತಿರುವ ಜಾಲದ ಬಗ್ಗೆ ಹಿಂದೂ ಜಾಗರಣ ವೇದಿಕೆ ಆತಂಕ ವ್ಯಕ್ತಪಡಿಸಿದೆ.

English summary
A fake director used to fraud young girl who wanted to plung in to Kannada Film Industry. Accused Latif used to send these girls to prostitution agents based in Hindu pilgrimage centers like Kukke Subramanya and so on said Hindu Jagaran Vedike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X