ಗೃಹಖಾತೆ ಬೇಕು ಎಂದು ರಚ್ಚೆ ಹಿಡಿದ ವರ್ತೂರು

Varthur demands home ministry
ಬೆಂಗಳೂರು ಆ.12: ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ನಿಗದಿತ ವೇಳೆಗೆ ಶುರುವಾಗಿ ನಿಗದಿತ ಸಮಯಕ್ಕೆ ಮುಕ್ತಾಯವಾಯಿತು. ಇದರ ಬೆನ್ನಲ್ಲೇ ಪೂರ್ವಯೋಜನೆಯಂತೆ ಸಚಿವ ವರ್ತೂರು ಪ್ರಕಾಶ್ ಅವರು ರಾತ್ರಿ ಮುಖ್ಯಮಂತ್ರಿಗಳ ಮನೆ ಬಾಗಿಲು ತಟ್ಟಿದರು.

ಸಚಿವನಾಗಬೇಕು ಎಂಬ ಬಹು ದಿನಗಳ ಕನಸು ನನಸಾದ ಸಂಭ್ರಮಾಚರಣೆಯಲ್ಲಿ ತೊಡಗದೆ ತಕ್ಷಣವೇ ಮುಖ್ಯಮಂತ್ರಿಗಳ ನಿವಾಸ ಕೃಷ್ಣಾಕ್ಕೆ ವರ್ತೂರು ತೆರಳಿದ್ದಾರೆ. ಕೋಲಾರದ 'ಹುಲಿ' ವರ್ತೂರು ಅವರು ತಮ್ಮ ಬೇಡಿಕೆಯನ್ನು ಸಿಎಂ ಸದಾನಂದ ಅವರ ಮುಂದಿಟ್ಟಿದ್ದಾರೆ. ಹುಲಿ ಆರ್ಭಟಕ್ಕೆ ಬೆಚ್ಚಿದ ಎವರ್ ಸ್ಮೈಲಿಂಗ್ ಸಿಎಂ ಪೆಚ್ಚಾಯಿತು.

'ನನಗೆ ಗೃಹ ಖಾತೆ ಅಥವಾ ಸಾರಿಗೆ ಖಾತೆ ನೀಡಬೇಕು ಇಲ್ಲದಿದ್ದರೆ ಅಷ್ಟೇ' ಎಂದು ಒಂದೆ ಉಸಿರಿನಲ್ಲಿ ಹೇಳಿದ ವರ್ತೂರು ಪ್ರಕಾಶ್ ಗೆ ಸಿಎಂ ಕಡೆಯಿಂದ ಸರಿಯಾದ ಪ್ರತ್ಯುತ್ತರ ಸಿಗದ ಕಾರಣ ಅದೇ ಸಿಟ್ಟಿನಲ್ಲಿ ವಾಪಾಸ್ಸಾದ ಘಟನೆ ನಡೆದಿದೆ.

ಹೊಸ ಸಚಿವರಿಗೆ ಹೊಸ ಖಾತೆಗಳನ್ನು ನೀಡಲಾಗಿದ್ದು,ವರ್ತೂರು ಪ್ರಕಾಶ್ ಅವರಿಗೆ ಜವಳಿ, ರಾಜೂಗೌಡ ಅವರಿಗೆ ಕ್ರೀಡಾ ಮತ್ತು ಯುವಜನ ಖಾತೆ, ಸಿ.ಪಿ. ಯೋಗೇಶ್ವರ್ ಗೆ ರೇಷ್ಮೆ, ಆನಂದ್ ಆಸ್ನೋಟಿಕರ್ ಗೆ ಐಟಿಬಿಟಿ, ವಿಜ್ಞಾನ ತಂತ್ರಜ್ಞಾನ ಹಾಗೂ ಬಾಲಚಂದ್ರ ಜಾರಕಿಹೊಳಿಗೆ ಪೌರಾಡಳಿತ ಖಾ್ ನೀಡಲಾಗಿದೆ. [ಸಂಪೂರ್ಣ ಖಾತೆ ವಿವರ ನೋಡಿ]

ವಲಸೆ vs ಮೂಲ ನಿವಾಸಿಗಳ ಫೈಟ್: ಈ ನಡುವೆ ಪಕ್ಷದ ನಿಷ್ಠಾವಂತ ಶಾಸಕರು ಹಾಗೂ ವಲಸಿಗರ ಮಧ್ಯೆ ಜಟಾಪಟಿ ನಡೆದಿದೆ. ಉಳಿದಿರುವ ಏಳು ಸ್ಥಾನಗಳು ಮೂಲ ಬಿಜೆಪಿ ಶಾಸಕರಿಗೆ ನೀಡಬೇಕು ಎಂದು ಆಗ್ರಹಪೂರ್ವಕ ಪತ್ರವನ್ನು ಧರ್ಮೇಂದ್ರ ಪ್ರಧಾನ್ ಅವರ ಕೈಗೆ ನೀಡಲಾಗಿದೆ.

ನೆನ್ನೆ ಮೊನ್ನೆ ಬಂದ ಬಚ್ಚೇಗೌಡ, ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಉಮೇಶ್ ಕತ್ತಿಗೆ ಸ್ಥಾನ ನೀಡುವುದಾದರೆ ನಮಗೆ ಯಾಕಿಲ್ಲ ಎಂದು ಆರೆಸ್ಸೆಸ್ ಬೆಂಬಲಿತ ಸಿಟಿ ರವಿ ಸೇರಿದಂತೆ ಮೂಲ ನಿವಾಸಿಗಳು ಕೇಳುತ್ತಿದ್ದಾರೆ. ಹೈಕಮಾಂಡ್ ನಡೆ ಕುತೂಹಲಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+