ಮಾವನ ಮನೆಯಲ್ಲಿ ಮೆಂಟಲ್ ಆದ ಕಟ್ಟಾ ಸುಬ್ರಹ್ಮಣ್ಯ
ಬೆಂಗಳೂರು,
ಆ.12: ಜೈಲು ಹಕ್ಕಿಯಾಗಿ ಸ್ವಾತಂತ್ರ್ಯ ಕಳೆದುಕೊಂಡಿರುವ ಮಾಜಿ ಮಂತ್ರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು (ಖೈದಿ ನಂಬರ್ 7801) ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಕಟ್ಟಾ ಸುಬ್ರಹ್ಮಣ್ಯ ಟಿವಿ ಮತ್ತು ದಿನಪತ್ರಿಕೆಗಳನ್ನು ಹೊರತೆಗೆಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲು ಸೂಪರಿಂಟೆಂಡೆಂಟ್ ಲಕ್ಷ್ಮಿನಾರಾಯಣ್ ಅವರು ಶುಕ್ರವಾರ ಮಧ್ಯಾಹ್ನ ತಿಳಿಸಿದ್ದಾರೆ. id="toptextpromo">ಈ
ಮಧ್ಯೆ, ಕಟ್ಟಾ ಸುಬ್ರಹ್ಮಣ್ಯಗೆ ಎದೆನೋವೂ ಕಾಣಿಸಿಕೊಂಡಿದೆ. ಅವರ ಆರೋಗ್ಯ ಸಾಕಷ್ಟು ಏರುಪೇರಾಗಿದ್ದು, ರಕ್ತದೊತ್ತಡ ಹೆಚ್ಚಾಗಿದೆ ಎಂದು ಅವರ ಆರೋಗ್ಯ ತಪಾಸಣೆ ನಡೆಸಿ ವೈದ್ಯರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಟ್ಟಾ
ಸುಬ್ರಹ್ಮಣ್ಯ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅದೇ ಸೆಲ್ ನಲ್ಲಿರುವ ಅವರ ಪುತ್ರ ಕಟ್ಟಾ ಜಗದೀಶ್ ಮತ್ತು ಇಟಾಸ್ಕ ಕಂಪನಿಯ ಶ್ರೀನಿವಾಸ್ ಮೂಕಪ್ರೇಕ್ಷಕರಾಗಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.











Click it and Unblock the Notifications