ಕೊಳ್ಳೇಗಾಲದ ಅತ್ಯಾಚಾರಿ ಮಾದೇಶನಿಗೆ ಜಾಮೀನು ಇಲ್ಲ
ಚಾಮರಾಜನಗರ,
ಆ. 12: ಕೊಳ್ಳೇಗಾಲ ತಾಲೂಕು ಮುಳ್ಳೂರು ಗ್ರಾಮದ ವಿವಾಹಿತ ಮಹಿಳೆಯ ಮೇಲೆ ಹಾಡಹಗಲೇ ಅತ್ಯಾಚಾರ ಮಾಡಿದ್ದ ಅದೇ ಗ್ರಾಮದ ಶಿವಮಲ್ಲು ಎಂಬವರ ಪುತ್ರ ಮಾದೇಶ ಅಲಿಯಾಸ್ ಕಾಂಟಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಚಾಮರಾಜನಗರದ ಸತ್ರ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮಿಜೀ ತಿರಸ್ಕರಿಸಿದ್ದಾರೆ. id="toptextpromo">ಮುಳ್ಳೂರು
ಗ್ರಾಮದ ಪಕ್ಕದ ಮನೆಯ ವಿವಾಹಿತ ಮಹಿಳೆ ಸ್ನಾನ ಮಾಡುವಾಗ ಆಕೆಯ ನಗ್ನ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನೊಂದಿಗೆ ದೈಹಿಕ ಸಂರ್ಪಕ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ನಿರಾಕರಿಸಿದರೆ ಫೋಟೊಗಳನ್ನು ಬಹಿರಂಗ ಮಾಡುವ ಬೆದರಿಕೆ ಹಾಕುತ್ತಿದ್ದ ಆರೋಪಿ 2011ರ ಮೇ 25ರಂದು ಮಧ್ಯಾಹ್ನ 1ಗಂಟೆಯ ಸಮಯದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದ. id='are-slot-1' class='oiad oi-axt oiadv'> id='top-searched-articles'>ಆರೋಪಿ
ಮಾದೇಶ ವಿವಾಹಿತ ಮಹಿಳೆಯ ಬೆತ್ತಲೆ ಫೋಟೊ ತೆಗೆದಿರುವುದಾಗಿ ಹೆದರಿಸಿ ಅವಳ ಮೇಲೆ ಅತ್ಯಾಚಾರ ಮಾಡಿರುವ ಅಂಶವನ್ನು ಸಾಕ್ಷ್ಯಧಾರಗಳ ಸಮೇತ ನಿರೂಪಿಸುವಲ್ಲಿ ಅಭಿಯೋಗ ಸಫಲವಾದ ಹಿನ್ನೆಲೆಯಲ್ಲಿ ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಅಭಿಯೋಗದ ಪರವಾಗಿ ಬಸವರಾಜ ಹುಡೇದಗಡ್ಡಿ ವಾದ ಮಂಡಿಸಿದ್ದರು











Click it and Unblock the Notifications