ಗುರುವಾರ ಯಾವ ಶಾಸಕನಿಗೆ ಯೋಗ ಒಲಿಯಲಿದೆ?

ಯಡಿಯೂರಪ್ಪ ಹಾಗೂ ಅನಂತ ಪ್ಲಸ್ ಶೆಟ್ಟರ್ ಬಳಗ ಎರಡೂ ಕಡೆ ಸೇರಿ ಒಟ್ಟು 16ಕ್ಕೂ ಹೆಚ್ಚು ಶಾಸಕರು ಕ್ಯಾಬಿನೆಟ್ ಸೀಟು ಆಕಾಂಕ್ಷಿಗಳಾಗಿದ್ದಾರೆ.
ಸಂಭವನೀಯ ಪಟ್ಟಿಯಲ್ಲಿ ಕಾಣಿಸಿಕೊಂಡ ಹೆಸರುಗಳು ಕೊನೆ ಕ್ಷಣದಲ್ಲಿ ಬದಲಾವಣೆಯಾಗುವ ಎಲ್ಲ ಸಾಧ್ಯತೆಗಳಿವೆ. ದೆಹಲಿ ಪ್ರವಾಸದಿಂದ ಹಿಂತಿರುಗಿದ ನಂತರ ಸಿಎಂ ಡಿವಿಎಸ್ ಅವರ ಜೊತೆ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಚರ್ಚೆ ನಡೆಸುವ ಸಾಧ್ಯತೆಯಿದೆ.
ಅನಂತ್ ಬಣ: ಬಾಲಚಂದ್ರ ಜಾರಕಿಹೊಳಿ, ಸೊಗಡು ಶಿವಣ್ಣ, ಸಿ.ಟಿ.ರವಿ, ವರ್ತೂರು ಪ್ರಕಾಶ್, ಅಪ್ಪಚ್ಚು ರಂಜನ್, ಆನಂದ್ ಆಸ್ನೋಟಿಕರ್, ರೆಡ್ಡಿ ಬಣದಿಂದ ಸೋಮಶೇಖರ ರೆಡ್ಡಿ ಅಥವಾ ಶ್ರೀರಾಮುಲು ಅಥವಾ ಇಬ್ಬರಿಗೂ ಸ್ಥಾನ ಕಲ್ಪಿಸಬಹುದು.
ಯಡಿಯೂರಪ್ಪ ಬಣ: ಅಪ್ಪು ಪಟ್ಟಣಶೆಟ್ಟಿ, ಸಿ.ಪಿ, ಯೋಗೀಶ್ವರ್, ರಾಜೂಗೌಡ, ಡಿ.ಎನ್ ಜೀವರಾಜ್, ಸುನೀಲ್ ವಾಲ್ಯಾಪುರೆ ಅಥವಾ ಹೊಳಲ್ಕೆರೆ ಚಂದ್ರಪ್ಪ. ಬಿ. ಸುರೇಶ್ ಗೌಡ, ಬೇಳೂರು ಗೋಪಾಲಕೃಷ್ಣ
ಈ ಪೈಕಿ ಬಾಲಚಂದ್ರ ಜಾರಕಿಹೊಳಿ, ವರ್ತೂರು ಪ್ರಕಾಶ್, ಸಿ.ಪಿ, ಯೋಗೀಶ್ವರ್, ರಾಜೂಗೌಡ, ಡಿ,ಎನ್ ಜೀವರಾಜ್ , ರೆಡ್ಡಿ ಬಣ ಒಬ್ಬರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಈಶ್ವರಪ್ಪ ಅವರ ಕಚೇರಿ ಮೂಲಗಳು ತಿಳಿಸಿದೆ.
ತುಮಕೂರಿನಿಂದ ಬಿ ಸುರೇಶ್ ಗೌಡ ಹಾಗೂ ಸೊಗಡು ಶಿವಣ್ಣ ಇಬ್ಬರೂ ಆಕಾಂಕ್ಷಿಗಳಾಗಿದ್ದು, ಒಬ್ಬರಿಗೆ ಮಣೆ ಹಾಕುವ ಸಂಭವವಿದೆ. ಮೀಸಲಾತಿ ಪಟ್ಟಿ ನೋಡಿದರೆ ಶೆಟ್ಟರ್ ಬಣದ ಅರವಿಂದ ಲಿಂಬಾವಳಿ ಹಾಗೂ ಎಸ್ ಕೆ ಬೆಳ್ಳುಬ್ಬಿ ಎದ್ದು ನಿಲ್ಲುತ್ತಾರೆ. ಆದರೆ ಲಿಂಬಾವಳಿ ಸೇರ್ಪಡೆಗೆ ಯಡ್ಡಿ ಬಣ ಅಡ್ಡಗಾಲು ಹಾಕಿದೆ.
ರವಿ ಅಥವಾ ಜೀವರಾಜ್? : ಚಿಕ್ಕಮಗಳೂರು ಹಾಗೂ ಶೃಂಗೇರಿ ಕ್ಷೇತ್ರ ಪ್ರತಿನಿಧಿಸುವ ಸಿಟಿ ರವಿ ಮತ್ತು ಜೀವರಾಜ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು. ಇಬ್ಬರೂ ಒಕ್ಕಲಿಗರಾಗಿರುವುದರಿಂದ ಜಾತಿ ನೆಪಒಡ್ಡಿ ಒಬ್ಬರನ್ನು ಕೆಳಕ್ಕೆ ತಳ್ಳುವಂತಿಲ್ಲ. ಮುಖ್ಯಮಂತ್ರಿ ಸದಾನಂದ ಗೌಡರ ಸ್ವಕ್ಷೇತ್ರವೂ ಆಗಿರುವುದರಿಂದ ಇಬ್ಬರಲ್ಲಿ ಯಾರನ್ನು ಆಯ್ಕೆಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.












Click it and Unblock the Notifications