ಗೌರಿ ಗಣೇಶ ಹಬ್ಬಕ್ಕೆ ಮೆಟ್ರೋ ರೈಲು ಓಡುತ್ತಾ?

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಂಗಳವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಬಿಎಂಆರ್ ಸಿಎಲ್ ಯೋಜನೆ ಬಗ್ಗೆ ವಿವರಿಸಿದರು. ಮೆಟ್ರೋ ರೈಲು ಸಂಚಾರ ಉದ್ಘಾಟನೆಗೆ ಆಹ್ವಾನ ನೀಡಿದರು. ಸೆಪ್ಟೆಂಬರ್ ಎರಡನೇ ವಾರದಲ್ಲಿ ಒಂದು ದಿನಾಂಕ ನಿಗದಿ ಮಾಡುವಂತೆ ಸದಾನಂದಗೌಡರಿಗೆ ಪ್ರಧಾನಿ ಸಚಿವಾಲಯ ಸೂಚಿಸಿದೆ.
ಎರಡನೇ ಹಂತಕ್ಕೆ ಆರ್ಥಿಕ ಬೆಂಬಲ : ಇನ್ನೂ ಪ್ರಗತಿಯಲ್ಲಿರುವ ಮೊದಲ ಹಂತದ ಮೆಟ್ರೋ ಯೋಜನೆ ವೆಚ್ಚವನ್ನು 8158 ಕೋಟಿ ರೂಪಾಯಿಗಳಿಂದ 11,609 ಕೋಟಿ ರುಪಾಯಿಗಳಿಗೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ
ಮೆಟ್ರೋ ಕಾಮಗಾರಿ ಅವಧಿಯನ್ನು ವಿಸ್ತರಿಸಲು ಕೇಂದ್ರ ಆರ್ಥಿಕ ಸಚಿವ ಪ್ರಣವ್ ಮುಖರ್ಜಿ ಅವರ ನೇತೃತ್ವದ ಎಂಆರ್‌ಟಿಎಸ್ (ಸಮೂಹ ಕ್ಷಿಪ್ರ ಸಾರಿಗೆ ವ್ಯವಸ್ಥೆ) ತಂಡವು ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ತಿಳಿಸಿದರು.
2011ರ ಜೂನ್ ತಿಂಗಳೊಳಗೆ ಮೆಟ್ರೊ ಕಾಮಗಾರಿ ಮುಗಿಸಬೇಕಾಗಿತ್ತು. ಈಗ 2013ರ ಡಿಸೆಂಬರ್‌ವರೆಗೆ ವಿಸ್ತರಿಸಲು ಅನುಮತಿ ಸಿಕ್ಕಿದೆ.












Click it and Unblock the Notifications