ಗಣಿ ಲೂಟಿಕೋರ ಬಳ್ಳಾರಿ ರೆಡ್ಡಿಗೂ ಕಟ್ಟಾ ದಾರಿಯೇ ಗತಿ

santosh hegde
ಬೆಂಗಳೂರು, ಆಗಸ್ಟ್ 10: 'ರಾಜ್ಯದ ಖನಿಜ ಸಂಪತ್ತನ್ನು ಲೂಟಿ ಮಾಡಿದ ಬಳ್ಳಾರಿ ರೆಡ್ಡಿ ಸಹೋದರರು ಹಾಗೂ ಬಿಎಸ್ ಯಡಿಯೂರಪ್ಪ ಅವರು ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರ ದಾರಿಯನ್ನೇ ಹಿಡಿಯಬೇಕು' ಎಂದು ಚಿಂತಕ ಡಾ. ಕೆ. ಮರುಳಸಿದ್ದಪ್ಪ ಆಶಿಸಿದ್ದಾರೆ.

ಅಖಿಲ ಭಾರತ ಯುವಜನ ಒಕ್ಕೂಟವು ನಗರದ ಶೇಷಾದ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 'ಭ್ರಷ್ಟಾಚಾರ ಮುಕ್ತ ರಾಜ್ಯ' ಜಾಥಾಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಹಾಗೂ ಅವರ ಪುತ್ರ ಕಟ್ಟಾ ಜಗದೀಶ್ ಅವರು ಸದ್ಯ ಜೈಲು ಸೇರಿದ್ದಾರೆ. ರಾಜ್ಯದಲ್ಲಿ ಖನಿಜ ಸಂಪತ್ತನ್ನು ಲೂಟಿ ಮಾಡಿದ ಎಲ್ಲರೂ ಕಟ್ಟಾ ಅವರ ಹಾದಿಯನ್ನೇ ಹಿಡಿಯಬೇಕು' ಎಂದರು.

ಜಾಥಾಗೆ ಚಾಲನೆ ನೀಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಭಾರತೀಯರಿಗೆ ಎಂದಿಗೂ ಸ್ವಾತಂತ್ರ್ಯವೆಂಬುದೇ ಇಲ್ಲ. ಹಿಂದೆಲ್ಲಾ ರಾಜಮನೆತನದವರು, ಬ್ರಿಟಿಷರು ದೇಶವನ್ನು ಆಳಿದರು. ಸ್ವಾತಂತ್ರ್ಯ ಪಡೆದ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಆದರೆ ಇಂದು ಆಡಳಿತ ನಡೆಸುವವರು ಜನರ ವಾಕ್ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಮಟ್ಟಕ್ಕೆ ತಲುಪಿದ್ದಾರೆ ಎಂದು ಕಿಡಿ ಕಾರಿದರು.

ಇದೇ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿದ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಲು ಸಹಿ ಸಂಗ್ರಹ ಮಾಡಲಾಯಿತು. ನಿವೃತ್ತ ನ್ಯಾಯಾಧೀಶ ಕೋ.ಚೆನ್ನಬಸಪ್ಪ, ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ ಇತರರು ಉಪಸ್ಥಿತರಿದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+