ಯಡಿಯೂರಪ್ಪ ಬಣದ 12 ಹೊಸ ಮಂತ್ರಿಗಳ ಪ್ರಮಾಣ

Shobha Karandlaje, Suresh Kumar taking oath
ಬೆಂಗಳೂರು, ಆ. 8 : ಡಿವಿ ಸದಾನಂದ ಗೌಡ ಸಂಪುಟ ಪುನಾರಚನೆ ಕುರಿತಂತೆ ಗೊಂದಲಗಳೆಲ್ಲ ನಿವಾರಣೆಯಾಗಿದ್ದು, ಯಡಿಯೂರಪ್ಪ ಬಣದ 12 ಮಂದಿ ಮತ್ತು ಜಗದೀಶ್ ಶೆಟ್ಟರ್ ಬಣದ 9 ಶಾಸಕರು ಇಂದು ಸಂಜೆ 5.30ಕ್ಕೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಉಪಸ್ಥಿತರಿದ್ದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಅಕ್ರಮ ಗಣಿಗಾರಿಕೆಯಲ್ಲಿ ಕೇಳಿ ಬಂದಿರುವ ಹೆಸರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರಿಂದ ಹೊರಗಿಡಲಾಗಿದೆ. ಹೀಗಾಗಿ ರೆಡ್ಡಿ ಸಹೋದರರು, ಶ್ರೀರಾಮುಲು ತಮ್ಮ ಖಾತೆ ಕಳೆದುಕೊಳ್ಳುವುದು ಖಚಿತವಾಗಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಅಕ್ರಮ ಗಣಿಗಾರಿಕೆಯ ಆರೋಪ ಎದುರಿಸುತ್ತಿರುವ ವಿ ಸೋಮಣ್ಣ ಸಂಪುಟವನ್ನು ಸೇರಿಸಿಕೊಳ್ಳಲಾಗಿದೆ. ಯಡಿಯೂರಪ್ಪ ಹೇಗಿದ್ದರೂ ಮುಖ್ಯಮಂತ್ರಿ ಮತ್ತು ವಿತ್ತಸಚಿವ ಪಟ್ಟ ಕಳೆದುಕೊಂಡಿದ್ದಾರೆ.

ಯಡಿಯೂರಪ್ಪ ಬಣ ಹೀಗಿದೆ :

* ಶೋಭಾ ಕರಂದ್ಲಾಜೆ (ಯಶವಂತಪುರ)
* ವಿಎಸ್ ಆಚಾರ್ಯ (ವಿಧಾನಪರಿಷತ್ ಸದಸ್ಯ)
* ಮುರುಗೇಶ್ ನಿರಾಣಿ (ಬಿಳಗಿ)
* ಉಮೇಶ್ ಕತ್ತಿ (ಚಿಕ್ಕೋಡಿ)
* ರೇಣುಕಾಚಾರ್ಯ (ಹೊನ್ನಾಳಿ)
* ಬಸವರಾಜ್ ಬೊಮ್ಮಾಯಿ (ಶಿಗ್ಗಾಂವಿ)
* ರೇವೂನಾಯಕ್ ಬೆಳಮಗಿ (ಗುಲಬರ್ಗ ಗ್ರಾಮೀಣ)
* ಸಿಎಂ ಉದಾಸಿ (ಹಾನಗಲ್)
* ಸಿಸಿ ಪಾಟೀಲ್ (ನರಗುಂದ)
* ಲಕ್ಷ್ಮಣ್ ಸವದಿ (ಅಥಣಿ)
* ಕೃಷ್ಣ ಪಾಲೇಮಾರ್ (ಮಂಗಳೂರು ಉತ್ತರ)
* ವಿ ಸೋಮಣ್ಣ (ವಿಧಾನಪರಿಷತ್ ಸದಸ್ಯ)

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+