ಶೆಟ್ಟರ್ ಬಣದ 9 ಮಂತ್ರಿಗಳ ಪ್ರಮಾಣ ವಚನ

ಜಗದೀಶ್ ಶೆಟ್ಟರ್ ಅವರಿಗೆ ಉಪ ಮುಖ್ಯಮಂತ್ರಿ ಪಟ್ಟ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದ್ದರಿಂದ ಶೆಟ್ಟರ್ ಸೇರಿದಂತೆ 9 ಶಾಸಕರು ಸಂಪುಟ ಸೇರುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಬಿಜೆಪಿ ನಾಯಕರು ನಡೆಸಿರುವ ಸಂಧಾನ ಫಲ ನೀಡಿ, ಶೆಟ್ಟರ್ ಗುಂಪು ಕೂಡ ಕೊನೆಗೆ ಪ್ರಮಾಣ ಸ್ವೀಕರಿಸಲು ನಿರ್ಧರಿಸಿತು.
ಇನ್ನೊಂದು ವಾರದಲ್ಲಿ ಉಳಿದ ಸ್ಥಾನಗಳನ್ನು ತುಂಬುವುದಾಗಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಹೇಳಿದ್ದಾರೆ. ಹಿಂದೆ ನಿರ್ವಹಿಸಿದಂತಹ ಖಾತೆಯನ್ನೇ ಈ ಸಚಿವರು ನಿರ್ವಹಿಸಲಿದ್ದಾರೆ ಎಂದು ಸದಾನಂದ ಗೌಡರು ಹೇಳಿದ್ದು, ವಿ ಸೋಮಣ್ಣ ಸೇರ್ಪಡೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಶೆಟ್ಟರ್ ಬಣ ಹೀಗಿದೆ :
* ಜಗದೀಶ್ ಶೆಟ್ಟರ್ (ಹುಬ್ಬಳ್ಳಿ)
* ಆರ್ ಅಶೋಕ್ (ಪದ್ಮನಾಭ ನಗರ)
* ಗೋವಿಂದ್ ಕಾರಜೋಳ (ಮುಧೋಳ)
* ನಾರಾಯಣಸ್ವಾಮಿ (ಆನೇಕಲ್)
* ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ)
* ಬಿಎನ್ ಬಚ್ಚೇಗೌಡ (ಹೊಸಕೋಟೆ)
* ಸುರೇಶ್ ಕುಮಾರ್ (ರಾಜಾಜಿನಗರ)
* ರವೀಂದ್ರನಾಥ್ (ದಾವಣಗೆರೆ ಉತ್ತರ)
* ರಾಮದಾಸ್ (ಮೈಸೂರು)












Click it and Unblock the Notifications