ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಮಾಣ ಸ್ವೀಕಾರ ಸಮಾರಂಭ

KSCA Stadium Bangalore
ಬೆಂಗಳೂರು ಆ.7: ನೂತನ ಸಚಿವರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವೇದಿಕೆ ಸಿದ್ಧವಾಗಿದ್ದು, ವಿಧಾನಸೌಧದ ಬದಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ಸಚಿವರು ಪ್ರಮಾಣ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಆದರೆ, ಸಚಿವರ ಪಟ್ಟಿ ಆಯ್ಕೆ ರಾತ್ರಿ ವೇಳೆ ನಡೆಯಲಿದ್ದು, ಬೆಳಗ್ಗೆ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.

ಎರಡು ಬಣಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದರೂ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಸಚಿವ ಸ್ಥಾನಕ್ಕೆ ಯಾವುದೇ ಕಿತ್ತಾಟ, ಲಾಬಿ ನಡೆದಿಲ್ಲ. ಪರಸ್ಪರ ಒಪ್ಪಿಗೆ ಮೂಲಕ ನೂತನ ಸಚಿವರುಗಳ ಪಟ್ಟಿ ತಯಾರಿಸಲಾಗುತ್ತಿದೆ.ಸೋಮವಾರ ಅಥವಾ ಬುಧವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಬಹುಶಃ ಎಲ್ಲಾ ಸಚಿವರು ಒಟ್ಟಿಗೆ ಪ್ರಮಾಣ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ಉಸ್ತುವಾರಿ ಧರ್ಮೆಂದ್ರ ಪ್ರಧಾನ್ ಸಹ ಬೆಂಗಳೂರಿಗೆ ಆಗಮಿಸುತ್ತಿದ್ದು, ಸಂಜೆಯೂಳಗೆ ಪಟ್ಟಿ ತಯಾರಾಗಿರಬೇಕಿತ್ತು. ಆದರೆ, ಸಚಿವರ ಪಟ್ಟಿಗೆ ಅಂತಿಮ ಸ್ವರೂಪ ನೀಡಲಾಗುತ್ತಿದ್ದು, ರಾತ್ರಿ ವೇಳೆ ರಾಜಕೀಯ ಬೇರೆ ಬಣ್ಣಕ್ಕೆ ತಿರುಗಲಿದೆ ಎಂದು ಈಶ್ವರಪ್ಪ ಹೇಳಿದರು.

ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್ ಧೋನಿ ಮಾದರಿಯಲ್ಲಿ ಸಚಿವ ಸಂಪುಟ ಬ್ಯಾಟಿಂಗ್ ಮಾಡಲಿದೆ. ಟೀಂ ಇಂಡಿಯಾ ಯಶಸ್ಸಿನ ಅಲೆ ನಮ್ಮ ಸಂಪುಟದಲ್ಲು ಕಾಣಲಿದೆ ಎಂದಿದ್ದರು. ಈಗ ಸಂಪುಟ ರಚೆನೆಗೂ ಮುನ್ನ ಕ್ರಿಕೆಟ್ ಸ್ಟೇಡಿಯಂ ಅನ್ನು ಆಯ್ಕೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನಿರಂತರ ಚರ್ಚೆ: ಬೆಂಗಳೂರಿನ ಮಳೆ ಬಿಟ್ಟು ಬಿಟ್ಟು ಬಂದರೂ ಬಿಜೆಪಿ ನಾಯಕರ ಚರ್ಚೆ ಮಾತ್ರ ನಿರಂತರವಾಗಿ ಸಾಗಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಹಳೇ ಕಚೇರಿಯಲ್ಲಿ ಎರಡು ಬಣಗಳ ನಡುವಣ ಮಹತ್ವದ ಚರ್ಚೆ ನಡೆದಿದೆ. ಸಿಎಂ ಸದಾನಂಡ ಗೌಡ ಅವರ ಅನುಗ್ರಹ ನಿವಾಸಕ್ಕೆ ನೀಡಿರುವ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಕೃಷ್ಣಯ್ಯ ಶೆಟ್ಟಿ ಮತ್ತು ಉದಾಸಿ ಚರ್ಚೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಪಟ್ಟು ಬಿಟ್ಟುಕೊಟ್ಟ ಶೆಟ್ಟರ್: ಗೃಹಖಾತೆ ಮತ್ತು ಹಣಕಾಸು ಇಲಾಖೆ ನಮಗೆ ಬೇಕು ಪಟ್ಟು ಹಿಡಿದು ಕೂತಿದ್ದ ಶೆಟ್ಟರ್ ಅವರ ಮನವೊಲಿಸಲಾಗಿದೆ. ಒಂದೆರಡು ಪ್ರಮುಖ ಖಾತೆಯನ್ನು ಯಡಿಯೂರಪ್ಪ ಬಣಕ್ಕೆ ಬಿಟ್ಟುಕೊಡಲು ಸಿದ್ಧರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಗೃಹ ಖಾತೆ ಮಾತ್ರ ಯಡಿಯೂರಪ್ಪ ಬಳಗಕ್ಕೆ ಸಿಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+