ಲೋಕಾಯುಕ್ತ ಆರೋಪಕ್ಕೆ ಜೆಎಸ್‌ಡ್ಲ್ಯೂ ಕಂಪನಿ ಕಿಡಿ

ಸುಪ್ರೀಂ ಕೋರ್ಟು ಗಣಿಗಾರಿಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕಂಪೆನಿಯ ವಿಜಯನಗರ ಘಟಕದ ಉತ್ಪಾದನೆ ಶೇ 35 ರಷ್ಟು ಕಡಿಮೆ ಆಗಲಿದೆ ಎಂದೂ ಅದು ಹೇಳಿದೆ. ರಾಜ್ಯ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿರುವ ವರದಿಯಲ್ಲಿ ಕಂಪೆನಿಯನ್ನು ಲಂಚ ನೀಡಿಕೆ, ಅಕ್ರಮ ಅದಿರು ದಾಸ್ತಾನು ಹಾಗೂ ಸಾಗಾಟದ ಆರೋಪ ಹೊರಿಸಿರುವದನ್ನು ಕಂಪೆನಿ ನಿರಾಕರಿಸಿದೆ.
ಮುಂದೆ ಈ ಕುರಿತು ಕಾನೂನು ಕ್ರಮ ಕೈಗೊಳ್ಳುವ ಸಾದ್ಯತೆ ಇದೆ ಎಂದು ಜಂಠಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಣಕಾಸು ಅಧಿಕಾರಿ ಶೇಷಗಿರಿ ರಾವ್ ಅವರು ಹೇಳಿದರು. ಕಂಪೆನಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಅವಕಾಶವನ್ನೂ ನೀಡದೆ ಊಹೆಯ ಆಧಾರದಲ್ಲಿ ಆರೋಪಗಳನ್ನು ಮಾಡಲಾಗಿದೆ ಎಂದೂ ಅವರು ಹೇಳಿದರು.
ಲೋಕಾಯುಕ್ತ ವರದಿಯಲ್ಲಿ ಜೆಎಸ್‌ಡ್ಲ್ಯೂ ಆವರಣದ ಸಮೀಪ ದಾಸ್ತಾನು ಮಾಡಲಾಗಿದ್ದ ಅಕ್ರಮ ಅದಿರನ್ನು ವಿವಿದೆಡೆಗಳಿಗೆ ಸಾಗಾಟ ಮಾಡಲಾಗಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಉತ್ತರಿಸಿದ ಅವರು ದಾಸ್ತಾನು ಮಾಡಲಾಗಿದ್ದ ಪ್ರದೇಶ ಕಂಪೆನಿಗೆ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications