ಭಗ್ನ ಪ್ರೇಮ: ಸಿಐಎಸ್‌ಎಫ್ ಪೇದೆಗಳು ಆತ್ಮಹತ್ಯೆಗೆ ಶರಣು

ಯಮುನಾ ಬ್ಯಾಂಕ್ ಮೆಟ್ರೊ ನಿಲ್ದಾಣದಲ್ಲಿ ಎಕೆ 47 ಸೇವಾ ರೈಫಲ್‌ನಿಂದ ತನ್ನ ಸಹೋದ್ಯೋಗಿ ಮಹಿಳೆಗೆ ಕಾನ್ಸ್‌ಟೇಬಲ್ ಗುಂಡಿಟ್ಟು, ತನ್ನ ಮೇಲೂ ಗುಂಡು ಹಾರಿಸಿಕೊಂಡ. ಇಬ್ಬರನ್ನೂ ತುರ್ತಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಅವರಿಬ್ಬರೂ ಕೊನೆಯುಸಿರೆಳೆದರು ಎಂದು ವೈದ್ಯರು ಘೋಷಿಸಿದರು.
ಮೃತ ಮಹಿಳಾ ಸಿಬ್ಬಂದಿ ಎನ್‌ವಿಎಸ್ ತೇಜಾ (22) ಮೂಲತ: ಆಂಧ್ರ ಪ್ರದೇಶದ ಗೋದಾ ವರಿ ಜಿಲ್ಲೆಯವಳಾಗಿದ್ದು, ಸಿಐಎಎಸ್‌ಎಫ್‌ನಲ್ಲಿ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಆಕೆಯ ಮೇಲೆ 6 ಸುತ್ತು ಗುಂಡಿನ ಮಳೆಗೆರೆದ ಕಾನ್ಸ್‌ಟೇಬಲ್ ವಿ ಎನ್ ಪಿಳ್ಳೈ (27) ತಮಿಳುನಾಡು ಮೂಲದವರೆಂದು ಪೊಲೀಸರು ಹೇಳಿದ್ದಾರೆ.
ಮೃತರು ಪರಸ್ಪರ ಪರಿಚಿತರಾಗಿದ್ದು, ಸ್ವತ: ತೇಜಾ ಆತನನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದಳು ಎಂದು ಆಕೆಯ ಸಹೋದ್ಯೋಗಿಗಳು ತಿಳಿಸಿದ್ದಾರೆ, ಬಹುಶಃ ಇದು ಪ್ರೇಮ ವೈಫಲ್ಯದ ಪ್ರಕರಣವಿರಬಹುದು ಎಂದು ಸಿಐಎಸ್‌ಎಫ್ ವಕ್ತಾರ ರೋಹಿತ್ ಕಟಿಯಾರ್ ತಿಳಿಸಿದ್ದಾರೆ. ಇಬ್ಬರೂ 2009ರಲ್ಲಿ ಸಿಐಎಸ್‌ಎಫ್ ಸೇವೆಗೆ ಸೇರಿದ್ದರು.












Click it and Unblock the Notifications