ಅಧಿಕಾರ ಹಸ್ತಾಂತರಕ್ಕೆ ಗೌರಿಶಂಕರ ಸ್ವಾಮೀಜಿ ಆಕ್ಷೇಪ

ಸಿದ್ದಗಂಗಾ ಮಠದ ಅಧಿಕಾರ ಹಸ್ತಾಂತರದ ವಿಚಾರ ಇನ್ನೂ ನ್ಯಾಯಾಲಯದಲ್ಲಿರುವುದರಿಂದ ಸಿದ್ದಲಿಂಗ ಶ್ರೀಗಳಿಗೆ ಶತಾಯುಷಿ ಶಿವಕುಮಾರ ಸ್ವಾಮೀಜಿಗಳು ಹಸ್ತಾಂತರ ಮಾಡಿರುವುದನ್ನು ಮಾನ್ಯ ಮಾಡಬಾರದೆಂದು ಗೌರಿಶಂಕರ ಸ್ವಾಮೀಜಿ ಅರ್ಜಿ ಸಲ್ಲಿಸಿದ್ದಾರೆ.
ಆ.4ರಂದು ತರಾತುರಿಯಲ್ಲಿ ನಡೆಸಲಾದ ಸಮಾರಂಭದಲ್ಲಿ ಸಿದ್ದಗಂಗಾ ಮಠದ ಅಧಿಕಾರವನ್ನು ಹಸ್ತಾಂತರಿಸಲಾಗಿತ್ತು. 104 ವಸಂತಗಳನ್ನು ಕಂಡಿರುವ 'ಕರ್ಮಯೋಗಿ' ಶಿವಕುಮಾರ ಶ್ರೀಗಳು ಸುದೀರ್ಘ ಸೇವೆಯ ನಂತರ ನಿವೃತ್ತಿ ಘೋಷಿಸಿದ್ದರು.
ಗೊಲ್ಲಹಳ್ಳಿ ಜಂಗಮ ಮಠದ ಸ್ವಾಮೀಜಿಯಾಗಿರುವ ಗೌರಿಶಂಕರ ಶ್ರೀಗಳು 1988ರಲ್ಲಿ ಸಿದ್ದಗಂಗಾ ಮಠದಿಂದ ಹೊರಬಿದ್ದಿದ್ದರು. 1981ರಿಂದಲೇ ನ್ಯಾಯಾಲಯದಲ್ಲಿ ಈ ಪ್ರಕರಣ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಮಠದಿಂದ ತಮ್ಮನ್ನು ಹೊರಹಾಕಿರುವುದೇ ನ್ಯಾಯಬಾಹಿರವಾಗಿತ್ತು. ಅಲ್ಲದೆ, ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥವಾಗಿರದ ಕಾರಣ ಅಧಿಕಾರ ಹಸ್ತಾಂತರಿಸಿರುವುದು ಕಾನೂನು ಉಲ್ಲಂಘನೆ ಮಾಡಿದಂತಾಗಿದೆ ಎಂದು ಅವರು ಮಧ್ಯಂತರ ಅರ್ಜಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications