ತಿರುಪತಿ, ಆ.5: ಇಲ್ಲಿನ ತಿರುಪತಿ ವೇದ ಶಾಲೆಯ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಬುಧವಾರ ಮೂವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುರಳಿ ಕೃಷ್ಣ ಎಂಬ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ ನಡೆಸಿದ ಆರೋಪಿಗಳ ವಿರುದ್ಧ ಸೆಕ್ಷನ್ 377ರ ಅಡಿ ಜತೆಗೆ ಸಾಯಿ ತೇಜಸ್ ಮತ್ತು ಸುದರ್ಶನ್ ಎಂಬುವವರ ವಿರುದ್ಧ ಸೆಕ್ಷನ್ 4ರ ಅಡಿ ರ್ಯಾಗಿಂಗ್ ಮಾಡಿದ ಆರೋಪದ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.