ಕೊಡಗಿಗೆ ಸಚಿವ ಸ್ಥಾನ, ಜನತೆಯಲ್ಲಿ ಚಿಗುರೊಡೆದ ಆಸೆ

Kodagu MlA Appachchu Ranjan
ಮಡಿಕೇರಿ, ಆ.5: ಮುಖ್ಯ ಮಂತ್ರಿಯಾಗಿ ಡಿ.ವಿ.ಸದಾನಂದಗೌಡ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಕೊಡಗಿನ ಜನತೆಯಲ್ಲಿ ಆಶಾಭಾವ ಮೂಡತೊಡಗಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನ ಶಾಸಕ ಅಪ್ಪಚ್ಚುರಂಜನ್ ರವರಿಗೆ ಈ ಬಾರಿಯಾದರು ಸಚಿವ ಸ್ಥಾನ ನೀಡಬಹುದೆಂಬ ನಿರೀಕ್ಷೆ ಇಲ್ಲಿನ ಜನತೆಯದ್ದಾಗಿದೆ. ಇದಕ್ಕೆ ಸದಾನಂದಗೌಡರು ಕೊಡಗಿನ ಅಳಿಯ ಎಂಬುವುದು ಕಾರಣವಾಗಿದೆ.

ಇದುವರೆಗೆ ಹೊರ ಜಿಲ್ಲೆಯ ಹಲವು ಸಚಿವರು ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು ಯಾರೂ ಕೂಡ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಿದಂತೆ ಕಂಡುಬರುತ್ತಿಲ್ಲ. ಎರಡು ತಿಂಗಳಿಗೋ, ಮೂರು ತಿಂಗಳಿಗೋ ಜಿಲ್ಲೆಗೆ ಆಗಮಿಸಿ ಸಭೆ ನಡೆಸಿ ಹೋದರೆ ಮತ್ತೆ ಇತ್ತ ತಿರುಗಿಯೂ ನೋಡುತ್ತಿರಲಿಲ್ಲ ಇದು ಜನರ ಆಕ್ರೋಶಕ್ಕೂ ಕಾರಣವಾಗಿತ್ತು. ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿದ್ದು ಎರಡು ಕ್ಷೇತ್ರದಲ್ಲಿಯೂ ಬಿಜೆಪಿ ಪ್ರಾಬಲ್ಯ ಮೆರೆದಿದೆ.

ಈಗಾಗಲೇ ಕೆ.ಜಿ.ಬೋಪಯ್ಯರವರು ಸ್ಪೀಕರ್ ಆಗಿರುವುದರಿಂದ ಅವರು ಎಲ್ಲಾ ಸಂದರ್ಭಗಳಲ್ಲಿ ಜನತೆಗೆ ಸಿಗುತ್ತಿಲ್ಲ. ಅಲ್ಲದೆ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶಾಸಕ ಅಪ್ಪಚ್ಚುರಂಜನ್ ರವರಿಗೆ ಸಚಿವ ಸ್ಥಾನ ಕೊಡಿ ಎಂಬುವುದು ಜಿಲ್ಲೆಯ ಜನರ ಒತ್ತಾಯ. ಇದುವರೆಗೆ ಆಡಳಿತ ನಡೆಸಿರುವ ಸರ್ಕಾರಗಳು ಜಿಲ್ಲೆಗೆ ಪ್ರಾತಿನಿಧ್ಯ ನೀಡಿದ್ದವು.

ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಜಿಲ್ಲೆಯನ್ನು ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನವೂ ಇಲ್ಲದಿಲ್ಲ. ಒಂದು ವೇಳೆ ಈ ಬಾರಿಯೂ ಜಿಲ್ಲೆಯನ್ನು ಪರಿಗಣಿಸದಿದ್ದರೆ ಜಿಲ್ಲೆಯಲ್ಲಿ ಬಿಜೆಪಿಗೆ ಮುಂದೆ ಉಳಿಗಾಲವಿಲ್ಲ ಎಂಬುವುದಂತು ಸತ್ಯ.

ಸದಾನಂದಗೌಡರು ಸಿಎಂ ಆದ ಬಳಿಕ ಒಂದೆಡೆ ಹಾಲಿ ಸಚಿವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು, ಮತ್ತೊಂದೆಡೆ ಶಾಸಕರು ಮಂತ್ರಿಗಿರಿಗಾಗಿ ಭಾರೀ ಲಾಭಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಇವರ ಮಧ್ಯೆ ಅಪ್ಪಚ್ಚುರಂಜನ್ ಅವರನ್ನು ಪರಿಗಣಿಸುತ್ತಾರಾ ಎಂಬುವುದು ಕೂಡ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+