ಗೃಹ ಸಚಿವ ಅಶೋಕ್ ಭವಿಷ್ಯ ಏನಾಗಬಹುದು?
ಬೆಂಗಳೂರು,
ಆ. 4 : ಆಯಕಟ್ಟಿನ ಗೃಹ ಮತ್ತು ಸಾರಿಗೆ ಖಾತೆ ಹೊಂದಿರುವ ಒಕ್ಕಲಿಗ ಬಣದ ಬಿಜೆಪಿಯ ಪ್ರಭಾವಿ ಸಚಿವರಲ್ಲೊಬ್ಬರಾದ ಆರ್ ಅಶೋಕ್ ಅವರ ಸಚಿವ ಸ್ಥಾನಕ್ಕೆ ಚ್ಯುತಿ ಬರುವುದೋ ಇಲ್ಲವೋ ಎನ್ನುವುದು ಈಗ ಬಹು ಚರ್ಚಿತವಾಗುತ್ತಿರುವ ವಿಷಯ. ಒಡೆದ ಮನೆಯಂತಾಗಿರುವ ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಬಣದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಅಶೋಕ್ ಸಚಿವ ಸ್ಥಾನದ ಭವಿಷ್ಯ ಸದ್ಯದಲ್ಲೇ ನಿರ್ಧಾರವಾಗಲಿದೆ. id="toptextpromo">ಜಗದೀಶ್
ಶೆಟ್ಟರ್ ಬಣ ಪ್ರಮಾಣ ವಚನ ಸಮಾರಂಭಕ್ಕೆ ಬಹಿಷ್ಕಾರ ಹಾಕಲು ನಿರ್ಧರಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ, ಅಶೋಕ್ ಮಾಜಿ ಸಿಎಂ ಆಪ್ತರ ಬಣದಲ್ಲಿ ತಮ್ಮನ್ನು ಗುರುತಿಸಿ ಕೊಂಡಿರಲಿಲ್ಲ. ಅನಂತ್ ಕುಮಾರ್ ಬಣದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದ ಅಶೋಕ್ ಒಳ್ಳೆ ಸಂಘಟನಾ ಚತುರ ಎನ್ನುವುದು ಬಿಜೆಪಿಯ ಎರಡೂ ಬಣಗಳೂ ಒಪ್ಪಿಕೊಳ್ಳುವ ವಿಷಯ. ಹಲವು ವಿವಾದಗಳಿಗೆ ಈಡಾಗಿದ್ದ ಡಾ. ವಿಎಸ್ ಆಚಾರ್ಯ ಬಳಿಯಿದ್ದ ಗೃಹ ಖಾತೆಯನ್ನು ಯಡಿಯೂರಪ್ಪ ಅಶೋಕ್ ಅವರಿಗೆ ಹೆಚ್ಚುವರಿಯಾಗಿ ವಹಿಸಿದ್ದರು ಇದೇ ಕಾರಣಕ್ಕೆ. id='are-slot-1' class='oiad oi-axt oiadv'> id='top-searched-articles'>ಸಾರಿಗೆ
ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿರುವ ಅಶೋಕ್ ನಷ್ಟದ ಹಾದಿಯಲ್ಲಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಲಾಭದ ಹಂತಕ್ಕೆ ತಂದು ನಿಲ್ಲಿಸಿದ್ದರು. ಬಿಎಂಟಿಸಿ ಸೇವೆಯಲ್ಲಿ ಸುಧಾರಣೆ ಕಂಡಿತ್ತು. ಆಚಾರ್ಯ ಅವರಿಗಿಂತ ಅಶೋಕ್ ಗೃಹ ಖಾತೆಯನ್ನು ಚೆನ್ನಾಗಿ ನಿರ್ವಹಿಸಿದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಲವು ಕೊಲೆ, ದರೋಡೆ ಮತ್ತು ಅಪಹರಣ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಿದ್ದರು. ಅದಕ್ಕೆ ತಾಜಾ ಉದಾಹರಣೆ ಎಂದರೆ ಹುಣಸೂರು ವಿದ್ಯಾರ್ಥಿಗಳ ಪ್ರಕರಣ.











Click it and Unblock the Notifications