ವೆಂಕಯ್ಯನ ಲ್ಯಾಪ್‌ಟಾಪ್ ಪೀಸ್ ಪೀಸ್ ಮಾಡಿದ ಯಡ್ಡಿ
ಬೆಂಗಳೂರು,
ಆಗಸ್ಟ್ 02: ಯಡಿಯೂರಪ್ಪನವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಬಿಸಾಕಿದ್ದೇ ತಡ ಬಿಜೆಪಿ ವೀಕ್ಷಕರಾದ ವೆಂಕಯ್ಯನಾಯ್ಡು ಮೇಲೆ ಅವರು ರೌದ್ರಾವತಾರ ತಾಳಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ. id="toptextpromo">ಭಾನುವಾರ
ರಾತ್ರಿ ಹೋಟೆಲ್ ಅಶೋಕಾದಲ್ಲಿ ಈ ಘಟನೆ ನಡೆದಿದೆ. ಒಂದು ಹಂತದಲ್ಲಿ, 'ಸಮಾಧಾನ ತಂದ್ಕೊಳ್ಳಿ ಯಡ್ಡಿಗಾರು' ಎಂದು ವೆಂಕಯ್ಯನಾಯ್ಡು ಹೇಳಿದ್ದೇ ತಡ, ಸೀದಾ ವೆಂಕಯ್ಯನತ್ತ ನುಗ್ಗಿದ 68 ವರ್ಷದ ಯಡ್ಡಿಗಾರು ವೆಂಕಯ್ಯನವರ ಲ್ಯಾಪ್‌ಟಾಪ್ ಕಸಿದುಕೊಂಡು ಅದನ್ನು ನೆಲಕ್ಕೆ ಎತ್ತಿಹಾಕಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ತಮ್ಮ ಆಪ್ತ ಸಚಿವನ ಕೆನ್ನೆಗೆ ರಪಾ ರಪಾ ಬಾರಿಸಿದ್ದಾರೆ. ಈ ಸಂದರ್ಭದಲ್ಲಿ ಎದುರಿಗಿದ್ದವರು ಅನಿವಾರ್ಯವಾಗಿ ಮೌನಕ್ಕೆ ಶರಣಾಗಿದ್ದಾರೆ. ಚಿಂತೆಬೇಡ, ಈ ಲ್ಯಾಪ್ ಟಾಪ್ ಕೊಳ್ಳಿ id='are-slot-1' class='oiad oi-axt oiadv'> id='top-searched-articles'>'ನಾನೇನು
ಮಹಾಪರಾಧ ಮಾಡಿದ್ದೀನಿ ಎಂದು ಇವರು (ಬಿಜೆಪಿ ವರಿಷ್ಠರಾದ ಅರುಣ್ ಜೇಟ್ಲಿ ಮತ್ತು ರಾಜನಾತ್ ಸಿಂಗ್) ನನ್ನ ಮೇಲೆ ಸವಾರಿ ಮಾಡ್ತಿದ್ದಾರೆ. ಏನು ಇವರ ಮುಖ ನೋಡಿಕೊಂಡು ಜನ ಓಟು ಹಾಕಿದ್ದಾರಾ? ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು ನಾನು. ಏನಂದ್ಕೊಂಡ್ಬಿಟ್ಟಿದ್ದಾರೆ ಇವರು' ಎಂದು ನಿರ್ಗಮಿತ ಯಡಿಯೂರಪ್ಪನವರು ಕೆಂಡಾಮಂಡಲರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.











Click it and Unblock the Notifications