ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಯಡಿಯೂರಪ್ಪ ಅವರ ಆಪ್ತ ಅಶೋಕ್ ಪದತ್ಯಾಗ

By Mahesh
|
Google Oneindia Kannada News

AG Ashok Harnalli Resigns
ಬೆಂಗಳೂರು, ಆ.2: ಕರ್ನಾಟಕ ರಾಜ್ಯ ಅಡ್ವೊಕೇಟ್ ಜನರಲ್ ಸ್ಥಾನಕ್ಕೆ ಅಶೋಕ್ ಹಾರನಹಳ್ಳಿ ಸೋಮವಾರ ಸಂಜೆ ರಾಜೀನಾಮೆ ನೀಡಿದ್ದಾರೆ. ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್‌ಗೆ ತಮ್ಮ ರಾಜೀನಾಮೆ ಪತ್ರವನ್ನು ಅಶೋಕ್ ಹಾರನಹಳ್ಳಿಸಲ್ಲಿಸಿದರು.

ರಾಜ್ಯಪಾಲರು ಅಶೋಕ್ ಅವರ ರಾಜೀನಾಮೆ ಅಂಗೀಕರಿಸಿದ್ದು, ಮುಂದಿನ ಅಡ್ವೊಕೇಟ್ ಜನರಲ್‌ರ ನೇಮಕವಾಗುವವರೆಗೆ ಹಂಗಾಮಿ ಅಡ್ವೊಕೇಟ್ ಜನರಲ್ ಆಗಿ ಮುಂದುವರಿಯಲಿದ್ದಾರೆ.

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಆಪ್ತ ಒಕ್ಕೂಟದ ಮೊದಲ ವಿಕೆಟ್ ಉರುಳಿದೆ. ಯಡಿಯೂರಪ್ಪ ಅವರಿಗೆ ಸದಾ ಕಾನೂನು ಬೆಂಬಲ ನೀಡುತ್ತಿದ್ದ ಅಶೋಕ್ ಅವರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಅವರು ಹಿಗ್ಗಾ ಮುಗ್ಗಾ ಬೈಯ್ದಿದ್ದರು.

ಹೊಸ ಸರ್ಕಾರದ ಜೊತೆಗೆ ಹೊಸ ಅಡ್ವೊಕೇಟ್ ಜನರಲ್‌ರನ್ನು ನೇಮಕಾತಿ ನಡೆಯುವುದು ಸಾಮಾನ್ಯ. ಆದರೆ, ಯಡಿಯೂರಪ್ಪ ಅವರ ಆಪ್ತರೇ ಸಿಎಂ ಪಟ್ಟ ಏರುವ ನಿರೀಕ್ಷೆ ಇರುವುದರಿಂದ ಅಶೋಕ್ ಮುಂದುವರೆಯುವ ಸಾಧ್ಯತೆಯಿತ್ತು.

ಆದರೆ, ಅಶೋಕ್ ಅವರು ಯಡಿಯೂರಪ್ಪ ಅವರ ಅಣತಿಯಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯಡಿಯೂರಪ್ಪ ಬೆಂಬಲಿತ ಅನೇಕ ಅಧಿಕಾರಿಗಳು ಇದೇ ಹಾದಿಯಲ್ಲಿ ಮುಂದುವರೆಯುವ ಸೂಚನೆಗಳು ಸಿಕ್ಕಿವೆ.

ಮಾಜಿ ಕಾನೂನು ಸಚಿವ ಹಾರನಹಳ್ಳಿ ರಾಮಸ್ವಾಮಿ ಅವರ ಸುಪುತ್ರ ಅಶೋಕ್ ಹಾರನಹಳ್ಳಿ ಅವರು 2008ರ ಜೂ.22ರಂದು ಹಾರನಹಳ್ಳಿ ರಾಜ್ಯ ಅಡ್ವೊಕೇಟ್‌ರಾಗಿ ನೇಮಕಗೊಂಡಿದ್ದರು.

English summary
Advocate Ashok Haranahalli has resigned to Karnataka State advocate general post. The 51-year-old new advocate general is the son of the veteran Congress leader and former minister Ramaswamy Haranahalli. He is close aide of former CM BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X